ಉಡುಪಿ: ಬಿಜೆಪಿ ಸರಕಾರದ ಆಡಳಿತ ಹಾಗೂ ದೇಶದ ನಾನಾ ಸಮಸ್ಯೆಗಳನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ  ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ – Vishwnaews24

Featured, ಉಡುಪಿ

ಉಡುಪಿ: ಬಿಜೆಪಿ ಸರಕಾರದ ಆಡಳಿತ ಹಾಗೂ ದೇಶದ ನಾನಾ ಸಮಸ್ಯೆಗಳನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ  ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ – Vishwnaews24

ಉಡುಪಿ: ಬಿಜೆಪಿ ಸರಕಾರದ ಆಡಳಿತ ಹಾಗೂ ದೇಶದ ನಾನಾ ಸಮಸ್ಯೆಗಳನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜೂ.17ರ ಶುಕ್ರವಾರ ಇಲ್ಲಿನ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ಡಿಸಿ ಕಚೇರಿ ಆವರಣ ಪ್ರವೇಶಿಸಲು ಯತ್ನಿಸಿದ್ದು, ಈ ವೇಳೆ ಪ್ರತಿಭಟನಾಕಾರರನ್ನು ಡಿಸಿ ಕಚೇರಿ ಆವರಣಕ್ಕೆ ಪ್ರವೇಶಿಸಲು ಪೊಲೀಸ್ ಸಿಬ್ಬಂದಿ ಬಿಡದಿದ್ದಾಗ ಗೇಟ್ ಬಳಿ ಕುಳಿತು ಪ್ರತಿಭಟನೆ ನಡೆಸಿದರು. ಭ್ರಷ್ಟಾಚಾರ, ಇಡಿ ದಾಳಿಯಂತಹ ಇತ್ತೀಚಿನ ಬೆಳವಣಿಗೆಗಳ ಕುರಿತು ಬಿಜೆಪಿ ಆಡಳಿತದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

May be an image of 9 people, people standing, road and text that says "ಪ್ರಾಡಕೊಟ್ಟುದೇಶ UMFIRON AYEGA ම ನಿಕ್ಷಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಕೇಸು ಮುಖಾಂತರ ಉಡುಪಿ ಜಿಲ್ಲೆ ಪೊಲೀಸ್ ದೌರ್ಜನ ಖಂಡಿಸಿ ರುರ್ಬಳಕ್ಕೆ ಹಾಗೂ ಬೃಹತ್ ಪ್ರತಿಭಟನೆ ದಿನಾಂಕ: 17-06-2022 ಶುಕ್ರವರ"

ಎಡಿಸಿ ವೀಣಾ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಂದ ಜ್ಞಾಪನಾ ಪತ್ರ ಸ್ವೀಕರಿಸಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಣಿಪಾಲ ಕಾಯಿನ್ ಸರ್ಕಲ್ ನಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಯಿತು.

ಉಡುಪಿ ರಾಜ್ಯ ಉಸ್ತುವಾರಿ ಅಭಯಚಂದ್ರ ಜೈನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಹುಸೇನ್ ಪಡುಬಿದ್ರಿ ಮಂಜುನಾಥ್, ಎಂ.ಎ.ಗಫೂರ್, ವಿಘ್ನೇಶ್ ಕಿಣಿ, ಹರೀಶ್ ಕಿಣಿ, ಕೃಷ್ಣಮೂರ್ತಿ ಆಚಾರ್ಯ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ರೋಶಿನಿ ಒಲಿವೇರ, ಪ್ರಖ್ಯಾತ್ ಶೆಟ್ಟಿ ಹಾಗೂ ಎಲ್ಲಾ ಬ್ಲಾಕ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸೋನಿಯಾ ಗಾಂಧಿ ಅವರಿಗೆ ಉಸಿರಾಟ ಸಂಬಂಧಿ ಸೋಂಕು – Vishwanews24

Leave a Reply