ಉಡುಪಿ : ಬಿಜೆಪಿ ಸೇರ್ಪಡೆ ಬಗ್ಗೆ ನನ್ನ ಬಳಿಯೇ ಮಾಹಿತಿ ಇಲ್ಲ , ಗೊತ್ತಾದರೆ ನಿಮಗೆ ತಿಳಿಸುತ್ತೇನೆ : ಪ್ರಮೋದ್ ಮಧ್ವರಾಜ್ – Vishwanews24

Featured, ಉಡುಪಿ

ನನ್ನ ಬಗ್ಗೆ ಚರ್ಚೆಗೆ ಯಾರು ಕಾರಣ ಎಂಬುದು ನನಗೆ ಗೊತ್ತಿಲ್ಲ..

ನನ್ನ ಮುಂದಿನ ರಾಜಕೀಯ ದೇವರು ನಡೆಸಿದಂತೆ ಆಗುತ್ತದೆ..

ಉಡುಪಿ : ಮಾಜಿ ಸಚಿವ ಪ್ರಮೋಜ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ವಿಚಾರ ಕೆಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಮೋದ್ ಮಧ್ವರಾಜ್, ಈ ಬಗ್ಗೆ ನನ್ನ ಬಳಿಯೇ ಮಾಹಿತಿ ಇಲ್ಲ. ಗೊತ್ತಾದರೆ ನಿಮಗೆ ತಿಳಿಸುತ್ತೇನೆ ಎಂದಿದ್ದಾರೆ.

ಮಲ್ಪೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪತ್ರಿಕಾಗೋಷ್ಠಿ ಕರೆಯದೆ , ಮಾಧ್ಯಮದವರ ಜೊತೆ ಮಾತನಾಡದೆ ತುಂಬಾ ವರ್ಷಗಳಾಗಿವೆ.ಅತೀ ಶೀಘ್ರದಲ್ಲೇ ಮಾತನಾಡುತ್ತೇನೆ. ನನ್ನ ಪರ ಹಾಗೂ ವಿರೋಧವಾಗಿ ಚರ್ಚೆ ಮಾಡುತ್ತಿರುವುದು ಇದು ಹೊಸದಲ್ಲ. ಹಳೆಯ ಪ್ರಕ್ರಿಯೆ ಈಗಲೂ ಮುಂದುವರೆಯುತ್ತಿದೆ ಎಂದರು.

ನನ್ನ ಬಗ್ಗೆ ಚರ್ಚೆಗೆ ಯಾರು ಕಾರಣ ಎಂಬುದು ನನಗೆ ಗೊತ್ತಿಲ್ಲ. ನನ್ನ ಬಗ್ಗೆ ಚರ್ಚೆ ನಡೆಯುತ್ತಿರುವುದಕ್ಕೆ ನಾನು ಸಂತೋಷ ಪಡುತ್ತಿದ್ದೇನೆ. ಬದಲು ಅದಕ್ಕಾಗಿ ದುಃಖ ಪಡುವುದಾಗಲೀ ಇನ್ನೊಬ್ಬರನ್ನು ದೂರುವುದಾಗಲೀ ಮಾಡುವುದಿಲ್ಲ. ನನ್ನ ಮುಂದಿನ ರಾಜಕೀಯ ದೇವರು ನಡೆಸಿದಂತೆ ಆಗುತ್ತದೆ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗ ಖ್ಯಾತ ನಟ, ಹಾಸ್ಯ ಕಲಾವಿದ ಮೋಹನ್ ಜುನೇಜ ನಿಧನ – Vishwanews24

Leave a Reply