ಉಡುಪಿ: ಬೀದಿ ನಾಯಿ ದಾಳಿ ; ಗಾಯಗೊಂಡಿದ್ದ ಹೆಣ್ಣು ನವಿಲಿನ ರಕ್ಷಣೆ – vishwanews24
ಉಡುಪಿ: ಬೀದಿ ನಾಯಿ ದಾಳಿ ; ಗಾಯಗೊಂಡಿದ್ದ ಹೆಣ್ಣು ನವಿಲಿನ ರಕ್ಷಣೆ
ಉಡುಪಿ: ಬೀದಿನಾಯಿಯಿಂದ ಗಾಯಗೊಂಡಿದ್ದ ಹೆಣ್ಣು ನವಿಲನ್ನು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ್ ವೊಲಕಾಡ್ ಅವರು ಆ.7ರಂದು ರಕ್ಷಿಸಿದ ಘಟನೆ ಉಡುಪಿಯ ಭಹ್ಮಗಿರಿಯಲ್ಲಿ ನಡೆದಿದೆ.
ಬೀದಿ ನಾಯಿಯೊಂದು ನವಿಲಿನ ಮೇಲೆ ದಾಳಿ ಮಾಡಿದ್ದು, ಹಾರಲು ಸಾಧ್ಯವಾಗದೆ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದೆ.ನವಿಲು ಕೆಸರಿನಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ನಿತ್ಯನಾಡು ವೊಳಕಾಡುಗೆ ಮಾಹಿತಿ ನೀಡಿದ್ದಾರೆ. ಕೂಡಲೇ ನವಿಲನ್ನು ತನ್ನ ರಕ್ಷಣೆಗೆ ತೆಗೆದುಕೊಂಡು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಗಾಯಗೊಂಡ ಹಕ್ಕಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಅರಣ್ಯ ಇಲಾಖೆ ಘೋಷಿಸಿದೆ.
ಕುಸಿದು ಬಿದ್ದ ಕಾಳಿ ನದಿ ಸೇತುವೆ: ಕಾರವಾರ- ಗೋವಾ ಸಂಚಾರ ಸ್ಥಗಿತ – vishwanews24
ರಕ್ಷಣಾ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಗುರುರಾಜ್ ಕಾವ್ರಾಡಿ, ಅರಣ್ಯ ಸಿಬ್ಬಂದಿ ಕೇಶವ ಪೂಜಾರಿ, ಪ್ರದೀಪ್ ಅಜ್ಜರಕಾಡು ಉಪಸ್ಥಿತರಿದ್ದರು.
