ಉಡುಪಿ: ಬೈಕ್ ಅಪಘಾತ – ಸವಾರ ಸ್ಥಳದಲ್ಲೇ ಸಾವು – Vishwanews24
ಉಡುಪಿ: ಬೈಕ್ ಸ್ಕಿಡ್ – ಸವಾರ ಸ್ಥಳದಲ್ಲೇ ಸಾವು
ಉಡುಪಿ: ಬೈಕ್ ವೊಂದು ಸ್ಕಿಡ್ ಆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಸೀದಿ ಬಳಿ ಸಂಭವಿಸಿದೆ.
ಕೋಟ ಮಣೂರು ನಿವಾಸಿ ಸುರೇಶ್ ಆಚಾರ್ಯ ಅವರ ಮಗ ವಿಕಾಸ್ ಆಚಾರ್ಯ (22) ಮೃತದುರ್ದೈವಿ.
ನೌಕಾಪಡೆಯ 2 ಹೆಲಿಕಾಪ್ಟರ್ ಪರಸ್ಪರ ಡಿಕ್ಕಿ ; 10 ಮಂದಿ ಮೃತ್ಯು – Vishwanews24
ಇವರು ನಿನ್ನೆ ರಾತ್ರಿ 1:30 ರ ಸುಮಾರಿಗೆ ಸಾಸ್ತಾನ ದಿಂದ ಕೋಟ ಮಣೂರು ಕಡೆ ಬರುತ್ತಿದ್ದರು. ಈ ವೇಳೆ ಕೋಟ ಗುಜಿರಿ ಅಂಗಡಿ ಸಮೀಪ ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಗಂಭೀರವಾಗಿ ಗಾಯಗೊಂಡ ಸುರೇಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
