ಉಡುಪಿ: ಭಾರತ್ ಬಂದ್ : ಕೃಷ್ಣನಗರಿಯಲ್ಲಿ ನೀರಸ ಪ್ರತಿಕ್ರಿಯೆ -Vishwanews24
ಉಡುಪಿ: ಭಾರತ್ ಬಂದ್ : ಕೃಷ್ಣನಗರಿಯಲ್ಲಿ ನೀರಸ ಪ್ರತಿಕ್ರಿಯೆ -Vishwanews24
ಉಡುಪಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಕರೆ ನೀಡಿರುವ ಕೃಷ್ಣನಗರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉಡುಪಿಯಲ್ಲಿ ವ್ಯಾಪಾರ ವಹಿವಾಟು ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಖಾಸಗಿ, ಸಿಟಿ, ಸರ್ವಿಸ್, ಕೆಎಸ್ ಆರ್ಟಿಸಿ ಬಸ್ ಸಂಚಾರ ಅಬಾಧಿತವಾಗಿದೆ.ತರಕಾರಿ, ದಿನಸಿ ಅಂಗಡಿಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಸಾಗುತ್ತಿದೆ ಜನತೆ ಬಂದ್ ಗೆ ಹೆಚ್ಚು ಒಲವು ತೋರಿಲ್ಲ.
ಇಂದಿನ ಬಂದ್ ಗೆ ಕೆಲವೊಂದು ಸಂಘಟನೆಗಳ ಬೆಂಬಲನೀಡಿದೆ. ಹೀಗಾಗಿ ಸಿಐಟಿಯು ನೇತೃತ್ವದಲ್ಲಿ ಇಂದು ಬೆಳಿಗ್ಗೆ ಉಡುಪಿಯಲ್ಲಿ ಪ್ರತಿಭಟನೆ ಜಾಥಾ ನಡೆಯಲಿದೆ. ಹೀಗಾಗಿ ನಗರ ಭಾಗದಲ್ಲಿ ಜನ ಸೇರದಂತೆ ಪೋಲಿಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.
