ಉಡುಪಿ: ಮಗುವಿನ ಚಿಕಿತ್ಸೆಗೆ ಹಣ ನೀಡುವುದಾಗಿ ನಂಬಿಸಿ ಆನ್ಲೈನ್ ವಂಚನೆ: ಪ್ರಕರಣ ದಾಖಲು – vishwanews24
ಉಡುಪಿ: ಮಗುವಿನ ಚಿಕಿತ್ಸೆಗೆ ಹಣ ನೀಡುವುದಾಗಿ ನಂಬಿಸಿ ಆನ್ಲೈನ್ ವಂಚನೆ: ಪ್ರಕರಣ ದಾಖಲು
ಬ್ರಹ್ಮಾವರ: ಮಗುವಿನ ಚಿಕಿತ್ಸೆಗೆ ಹಣ ನೀಡುವುದಾಗಿ ನಂಬಿಸಿ ಮಹಿಳೆಗೆ 30,000 ರೂ. ಆನ್ಲೈನ್ ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೇರ್ಕಾಡಿಯ ಮಹಿಳೆಯೊಬ್ಬರ 1 ತಿಂಗಳ ಗಂಡು ಮಗುವಿಗೆ ಹೃದಯ ಸಂಬಂಧಿ ಖಾಯಿಲೆ ಇದ್ದು ಖಾಯಿಲೆ ಚಿಕಿತ್ಸೆಗೆ ಸುಮಾರು 10 ಲಕ್ಷ ಖರ್ಚು ಆಗುವುದರಿಂದ ಹಣದ ಸಂಗ್ರಹದ ಬಗ್ಗೆ ವಾಟ್ಸ್ಅಪ್ ಗ್ರೂಪ್ನಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ರಾಜು ಕೆ ನೇಮಕ – vishwanews24
ಜು.28ರಂದು ಮಹಿಳೆಗೆ ಕರೆ ಮಾಡಿದ ವ್ಯಕ್ತಿ, ಚಿಕಿತ್ಸೆಗೆ ನಾನು 3 ಲಕ್ಷ ಹಣ ಕಳುಹಿಸುತ್ತೇನೆ, ಆದರೆ ಜಿ.ಎಸ್.ಟಿ ಕಟ್ಟಲು 30,000 ರೂ. ಹಣ ನನಗೆ ಕಳುಹಿಸಬೇಕು ಎಂದು ಹೇಳಿದ್ದರು. ಅದನ್ನು ನಂಬಿದ ಮಹಿಳೆ ಆ ವ್ಯಕ್ತಿಯ ಖಾತೆಗೆ 30,000 ರೂ. ಹಣ ಕಳುಹಿಸಿದ್ದರು. ಆ ಹಣ ಪಡೆದ ವ್ಯಕ್ತಿ ಮಹಿಳೆಗೆ ಹಣ ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.
