ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ – vishwanews24

Featured, ಉಡುಪಿ

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

ಉಡುಪಿ : ಮಾಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ ವತಿಯಿಂದ ಉಡುಪಿ ಶೋರೂಮ್‌ನಲ್ಲಿ ಮೇ ೨ರಿಂದ ಮೇ ೧೦ರವರೆಗೆ ಹಮ್ಮಿಕೊಳ್ಳಲಾಗಿರುವ ಡೈಮಂಡ್ಸ್

ಆಭರಣಗಳ ವಿಶೇಷ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ರಶ್ಮಿತಾ ಶೆಟ್ಟಿ ಹಾಗೂ ರಚಿತಾ ಶೆಟ್ಟಿ ನೂತನ ಆಭರಣಗಳನ್ನು ಅನಾವರಣಗೊಳಿಸುವ ಮೂಲಕ ಪ್ರದರ್ಶನವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಶ್ಮಿತಾ ಶೆಟ್ಟಿ, ಮಲಬಾರ್ ಗೋಲ್ಡ್‌ನಲ್ಲಿ ಅತ್ಯುತ್ತಮ ಆಭರಣಗಳ ವಿಶಾಲ ಸಂಗ್ರಹವಿದ್ದು, ಇಲ್ಲಿನ ಸಿಬ್ಬಂದಿ ಗ್ರಾಹಕ ಸ್ನೇಹಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಪ್ರದರ್ಶಿಸಲಾದ ಡೈಮಂಡ್ಸ್ ಆಭರಣಗಳು ಪ್ರತಿಯೊಬ್ಬರಿಗೂ ಆಕರ್ಷಕವಾಗಿವೆ ಎಂದು ಹೇಳಿದರು. ಪ್ರದರ್ಶನ ಯಶಸ್ವಿಯಾಗಲಿ ಎಂದು ಹಾರೈಸಿದರು.

ರಚಿತಾ ಶೆಟ್ಟಿ ಮಾತನಾಡಿ, ತಾನು ಕಳೆದ ೧೨ ವರ್ಷಗಳಿಂದ ಮಲಬಾರ್ ಗೋಲ್ಡ್‌ನ ಗ್ರಾಹಕಿಯಾಗಿದ್ದು, ಇಲ್ಲಿನ ವಿಭಿನ್ನ ಸಂಗ್ರಹಗಳನ್ನು ಹೊಂದಿದ್ದೇನೆ. ಇಲ್ಲಿ ದೊರೆಯುವ ಪ್ರತಿಯೊಂದು ಆಭರಣವೂ ಅಪೂರ್ವ ಮತ್ತು ವಿಶಿಷ್ಟವಾಗಿವೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ರಶ್ಮಿತಾ ಶೆಟ್ಟಿ ಮತ್ತು ರಚಿತಾ ಶೆಟ್ಟಿ ಅವರು ತನ್ವಿಕಾ ಬ್ರ್ಯಾಂಡ್‌ನ ನೂತನ ಚಿನ್ನಾಭರಣ ಸಂಗ್ರಹವನ್ನು ಅನಾವರಣಗೊಳಿಸಿದರು. ಚಿನ್ನಾಭರಣಗಳ ಕುರಿತು ಸಿಬ್ಬಂದಿ ಸಂದೀಪ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಖಾ ಮುಖ್ಯಸ್ಥರಾದ ವಿಜಯ್ ಕುಮಾರ್ ಡಿ , ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಹರೀಶ್ ಎಂ.ಜಿ,ಮಾರುಕಟ್ಟೆ ಉಸ್ತುವಾರಿ ತಂಝೀಮ್ ಶಿರ್ವ ಎಚ್.ಆರ್ ,ದಿವ್ಯಾ ಮತ್ತಿತರರು ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply