ಉಡುಪಿ : ಮಾ.2ರಿಂದ ರಂಜಾನ್ ಉಪವಾಸ ಆರಂಭ – vishwanews24
ಉಡುಪಿ : ರಾಜ್ಯಾದ್ಯಂತ ಮಾ.2ರಿಂದ ರಂಜಾನ್ ಉಪವಾಸ ವ್ರತ ಆರಂಭ
ಉಡುಪಿ : ಪವಿತ್ರ ರಮಝಾನ್ ಮಾಸದ ಚಂದ್ರ ದರ್ಶನವು ಶುಕ್ರವಾರ ಗೋಚರಿಸದೆ ಇರುವುದರಿಂದ ಮಾರ್ಚ್ 2ರಿಂದ ರಾಜ್ಯಾದ್ಯಂತ ಉಪವಾಸ ವ್ರತ ಆಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಚಂದ್ರ ದರ್ಶನ ಸಮಿತಿಯ ಸಂಚಾಲಕ ಮೌಲಾನಾ ಮನ್ಸೂದ್ ಇಮ್ರಾನ್ ರಶಾದಿ ಹೇಳಿದ್ದಾರೆ.
ಶುಕ್ರವಾರ ಸಂಜೆ ರಾಜ್ಯ ವಕ್ಸ್ ಬೋರ್ಡ್‌ನ ಕೇಂದ್ರ ಕಚೇರಿ(ದಾರುಲ್ ಔಕಾಫ್)ಯಲ್ಲಿ ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಚಂದ್ರ ದರ್ಶನದ ಬಗ್ಗೆ ಲಭ್ಯವಾದ ಮಾಹಿತಿ ಕುರಿತು ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮಂಗಳೂರು: ಹಕ್ಕಿ ಜ್ವರ ಹಿನ್ನೆಲೆ ; ಜಿಲ್ಲೆಯಲ್ಲಿ ತೀವ್ರ ನಿಗಾ – vishwanews24
ಆಂಧ್ರಪ್ರದೇಶ, ಬಿಹಾರ, ಉತ್ತರಪ್ರದೇಶ, ತಮಿಳುನಾಡು, ಉತ್ತರಾಖಂಡ, ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾಹಿತಿಗಳನ್ನು ತರಿಸಿಕೊಳ್ಳಲಾಗಿತ್ತು. ಎಲ್ಲಿಯೂ ಚಂದ್ರದರ್ಶನವಾದ ಮಾಹಿತಿ ಇಲ್ಲ. ಆದುದರಿಂದ, ಶನಿವಾರದಿಂದ ತರಾವೀಹ್ ನಮಾಝ್ ಹಾಗೂ ರವಿವಾರ ಮೊದಲ ಉಪವಾಸ ಆಚರಿಸಲಾಗುವುದು ಎಂದು ಮನ್ಸೂದ್ ಇಮ್ರಾನ್ ತಿಳಿಸಿದರು.
