ಉಡುಪಿ :ಮುದ್ರಾಧಾರಣೆಗೆ ಅವಕಾಶ ಇಲ್ಲ – ಆದೇಶ ವಾಪಸ್ ಪಡೆಯುವ ಭರವಸೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ – Vishwanews24
ಉಡುಪಿ :ಮುದ್ರಾಧಾರಣೆಗೆ ಅವಕಾಶ ಇಲ್ಲ – ಆದೇಶ ವಾಪಸ್ ಪಡೆಯುವ ಭರವಸೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ ಅವರ ನಿರ್ಧಾರವನ್ನು ಸ್ವಾಗತಿಸಿದ ಉಡುಪಿ ಪೇಜಾವರ ಶ್ರೀ
ಉಡುಪಿ : ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾ ಧಾರಣೆಗೆ ಅವಕಾಶವಿಲ್ಲ ಎಂಬ ಆದೇಶವನ್ನು ವಾಪಸ್ ಪಡೆಯುವುದಾಗಿ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದ್ದಾಗಿ ಉಡುಪಿ ಶಾಸಕ ಕೆ . ರಘುಪತಿ ಭಟ್ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸಚಿವೆಯನ್ನು ಭೇಟಿ ಮಾಡಿದ ಶಾಸಕರು, ಮಾಧ್ವ ಸಮುದಾಯದಲ್ಲಿ ಈ ಆದೇಶದ ಬಗ್ಗೆ ವ್ಯಕ್ತ ಗೊಂಡಿರುವ ಆಕ್ರೋಶದ ಬಗ್ಗೆ ಮನವರಿಕೆ ಮಾಡಿದ್ದರು. ಇದು ಮಾಹಿತಿ ಕೊರತೆಯಿಂದ ಆಗಿರುವ ಆದೇಶ.
ಈ ಬಗ್ಗೆ ಸಚಿವರಿಗೆ ಪೂರ್ಣ ಮಾಹಿತಿ ನೀಡಿರುವುದರಿಂದ ಆದೇಶ ವಾಪಾಸು ಪಡೆಯುವ ಭರವಸೆ ನೀಡಿದ್ದಾರೆ. ಮುಂದೆ ಏನಾಗುತ್ತೋ ನೋಡೋಣ ಎಂದು ಶಾಸಕ ಭಟ್ ಹೇಳಿದ್ದಾರೆ. ಈ ವಿಚಾರ ಸಂಬಂಧ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಶಾಸಕರ ಮೂಲಕ ಮೊಬೈಲ್ ನಲ್ಲಿ ಸಚಿವೆ ಜೊತೆ ಮಾತನಾಡಿದ್ದರು. ಈ ಆದೇಶದಿಂದ ಮಾಧ್ವ ತತ್ವ ಅನುಯಾಯಿಗಳಿಗೆ ಆಗಿರುವ, ನೋವನ್ನು ತಿಳಿಸಿದ್ದರು.
ಪಡುಬಿದ್ರಿ ಸಿ.ಎ ಬ್ಯಾಂಕ್ ವತಿಯಿಂದ ಏಳು ದಿನವೂ ವಿಭಿನ್ನ ಸಹಕಾರಿ ಸಪ್ತಾಹ ಕಾರ್ಯಕ್ರಮ :vishwanews24
ಪೇಜಾವರ ಶ್ರೀ ಅಭಿನಂದನೆ: ವಿವಾದಕ್ಕೆ ಕಾರಣವಾಗಿದ್ದ ಸುತ್ತೋಲೆಯನ್ನು ವಾಪಾಸು ಪಡೆಯುವ ಭರವಸೆ ನೀಡಿರುವ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ನಿರ್ಧಾರವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ
