ಉಡುಪಿ : ಯಕ್ಷಗಾನ ಪ್ರಿಯರಿಗೆ “ಯಕ್ಷಪಂಚಮಿ-2024″ರ ರಸದೌತಣ – ಸೆ. 13 ರಿಂದ 20 ರ ಐದು ದಿನಗಳ ಯಕ್ಷಗಾನ : ತಲ್ಲೂರು ಶಿವರಾಮ ಶೆಟ್ಟಿ – vishwanews24

Featured, ಉಡುಪಿ

ಉಡುಪಿ : ಯಕ್ಷಗಾನ ಪ್ರಿಯರಿಗೆ “ಯಕ್ಷಪಂಚಮಿ-2024″ರ ರಸದೌತಣ – ಸೆ. 13 ರಿಂದ 20 ರ ಐದು ದಿನಗಳ ಯಕ್ಷಗಾನ : ತಲ್ಲೂರು ಶಿವರಾಮ ಶೆಟ್ಟಿ

ಉಡುಪಿ: ಶ್ರೀ ಕ್ಷೇತ್ರ ಹಟ್ಟಿಯಂಗಡಿ ಕೃಪಾಫೋಷಿತ ಯಕ್ಷಗಾನ ಮಂಡಳಿ ,ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ತು ಇವರ ಸಹಕಾರದಲ್ಲಿ ಸೆಪ್ಟೆಂಬರ್ 13 ರಿಂದ 19 ರ ವರೆಗೆ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷ ಪಂಚಮಿ ಎಂಬ ಶೀರ್ಷಿಕೆಯಡಿಯಲ್ಲಿ ಐದು ದಿನದ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆಂದು ಪತ್ರಿಕಾಗೋಷ್ಠಿಯಲ್ಲಿ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

ಮಳೆಗಾಲದಲ್ಲಿ ಯಕ್ಷಗಾನ ಕಲಾವಿದರಿಗೆ ಬೆಂಬಲಿಸುವ ಮತ್ತು ಕಲಾಭಿಮಾನಿಗಳಿಗೆ ರಸದೌತಣ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಕಳೆದ ಐದು ವರ್ಷಗಳಿಂದ ನಡೆಯುತ್ತಿದೆ,ಇದರ ಜತೆಗೆ ಒಂದು ದಿನ ಉದ್ಘಾಟನೆ ಹಾಗೂ ಸಮರೋಪದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹಟ್ಟಿಯಂಗಡಿ ಮೇಳದ ಯಜಮಾನ ರಂಜಿತ್ ಶೆಟ್ಟಿ ತಿಳಿಸಿದರು.

ಕಾಪು : ಸಂಪೂರ್ಣ ಕಿತ್ತುಹೋದ ಮೂಳೂರು ಫಿಶರಿಸ್ ರಸ್ತೆ : ವಾಹನ ಸವರಾರಿಗೆ- ಪಾದಚಾರಿಗಳಿಗೆ ಸಂಕಟ : vishwanews24

Leave a Reply