ಉಡುಪಿ : ಯುವ ಸ್ವಯಂ ಸೇವಕರ ಹುದ್ದೆ: ಅರ್ಜಿ ಆಹ್ವಾನ -Vishwanews24

Featured, ಉಡುಪಿ

ಉಡುಪಿ : ಯುವ ಸ್ವಯಂ ಸೇವಕರ ಹುದ್ದೆ: ಅರ್ಜಿ ಆಹ್ವಾನ -Vishwanews24

ಉಡುಪಿ:ಕೇಂದ್ರ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯವು ದೇಶದಾದ್ಯಂತ ರಾಷ್ಟ್ರೀಯ ಯುವ ಸ್ವಯಂಸೇವಕರು ಎಂಬ ಕಾರ್ಯಕ್ರಮವನ್ನು ನೆಹರು ಯುವ ಕೇಂದ್ರದ ಮೂಲಕ ಅನುಷ್ಠಾನಗೊಳಿಸುತ್ತಿದ್ದು, ಈ ಯೋಜನೆಯಡಿಯಲ್ಲಿ ಜಿಲ್ಲಾವಾರು ಯುವ ಜನರನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಉಡುಪಿ : ಆನ್‌ಲೈನ್ ತಂತ್ರಜ್ಞಾನದಡಿ ವಿದ್ಯುತ್ ಬಿಲ್ ಪಾವತಿಗೆ ಅವಕಾಶ -Vishwanews24

ಅಭ್ಯರ್ಥಿಗಳು 18 ರಿಂದ 29 ವರ್ಷ ವಯೋಮಿತಿಯವರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರವಾಸ ಭತ್ಯೆ ಸೇರಿ ಗೌರವಧನವಾಗಿ ತಿಂಗಳಿಗೆ 5000 ರೂ. ನೀಡಲಾಗುವುದು.

ಅರ್ಜಿ ಸಲ್ಲಿಸಲು ಫೆಬ್ರವರಿ 25 ಕೊನೆಯ ದಿನ, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್  https://nyks.nic.in/nycapp/main.asp  ಅಥವಾ  ಜಿಲ್ಲಾ ಯುವ ಅಧಿಕಾರಿಗಳು, ನೆಹರು ಯುವ ಕೇಂದ್ರ, ರಜತಾದ್ರಿ, ಜಿಲ್ಲಾಧಿಕಾರಿ ಕಛೇರಿ ಆವರಣ, ಮಣಿಪಾಲ ದೂ. ಸಂಖ್ಯೆ 0820-2574992 ಅನ್ನು ಸಂಪರ್ಕಿಸುವ0ತೆ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ವಿಲ್ಲ್ಫ್ರೆಡ್ ಡಿಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಗೆ ಕುಚಲಕ್ಕಿ ವಿತರಿಸಬೇಕೆಂದು ಮುಖ್ಯ ಮಂತ್ರಿಗಳಿಗೆ ಸಚಿವ ಕೋಟ ಹಾಗೂ ಅಂಗಾರ ಮನವಿ -Vishwanews24