ಉಡುಪಿ : ರಾಮ್ ಅಡ್ವಟೈಜರ್  ಮಾಲಕ ರಾಮಚಂದ್ರ ಆಚಾರ್ಯ ನಿಧನ – vishwanews24

Featured, ಉಡುಪಿ

ರಾಮ್ ಅಡ್ವಟೈಜರ್  ಮಾಲಕ ರಾಮಚಂದ್ರ ಆಚಾರ್ಯ ನಿಧನ 

ಉಡುಪಿ: ಇಲ್ಲಿನ ರಾಮ್ ಅಡ್ವಟೈಜರ್ ಇದರ ಮಾಲಕ ರಾಮಚಂದ್ರ ಆಚಾರ್ಯ (66 ವ) ಅವರು ಮೇ.22ರ ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ಇವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮೈಸೂರು: ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರು ಸಾವು – vishwanews24

ರಾಮಚಂದ್ರ ಆಚಾರ್ಯ ಅವರು ಕಳೆದ ಸುಮಾರು 25 ವರ್ಷಗಳಿಂದ ಜಾಹಿರಾತು ಏಜೆನ್ಸಿ ನಡೆಸಿಕೊಂಡು ಬಂದಿದ್ದರು. ಇವರು ಉಡುಪಿಯ ರೈಲ್ವೆ ಯಾತ್ರಿ ಸಂಘದ ಖಜಾಂಚಿಯಾಗಿ ಕೆಲಸ ನಿರ್ವಹಿಸಿ ಉಡುಪಿಗೆ ಹೆಚ್ಚಿನ ರೈಲ್ವೆ ಸೌಕರ್ಯಕ್ಕಾಗಿ ಹೋರಾಟ ನಡೆಸಿದ್ದರು.

ಕಿನ್ನಿಮುಲ್ಕಿ ವೀರಭದ್ರ ದೇವಾಲಯದ ಸಹಾಯಕ ಅರ್ಚಕರಾಗಿಯೂ ಕೆಲಸ ನಿರ್ವಹಿಸಿದ್ದರು. ಅಲ್ಲದೆ ಉಡುಪಿ ಜನಸಂಘದ ಹಾಗೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಕಿನ್ನಿಮುಲ್ಕಿ ವಾರ್ಡಿನ ಬೂತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಉಡುಪಿ: ಹವಾಮಾನ ವೈಪರಿತ್ಯ – ಪ್ರವಾಸಿ ತಾಣಗಳಲ್ಲಿ ವಾಟರ್‌ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ – vishwanews24

 

Leave a Reply