ಉಡುಪಿ: ‘ರೋಸ್’ ಸಮಾರಂಭದಲ್ಲಿ ಭಾಗವಹಿಸಿದ್ದ ಯುವತಿ ಕುಸಿದು ಬಿದ್ದು ಸಾವು – Vishwanews24

Featured, ಉಡುಪಿ

ಉಡುಪಿ: ‘ರೋಸ್’ ಸಮಾರಂಭದಲ್ಲಿ ಭಾಗವಹಿಸಿದ್ದ ಯುವತಿ ಕುಸಿದು ಬಿದ್ದು ಸಾವು

ಉಡುಪಿ: ರೋಸ್ ಸಮಾರಂಭದಲ್ಲಿ(ಕ್ರೈಸ್ತರ ಮದುವೆಯ ಮುನ್ನ ದಿನ ನಡೆಯುವ ಕಾರ್ಯಕ್ರಮ) ರಕ್ತದೊತ್ತಡ ಕಡಿಮೆಯಾಗಿ ಕುಸಿದುಬಿದ್ದು ಯುವತಿಯೋರ್ವಳು ಮೃತಪಟ್ಟ ಘಟನೆ ಕೊಳಲಗಿರಿ ಹಾವಂಜೆಯಲ್ಲಿ ನಡೆದಿದೆ.

ಮೃತ ಯುವತಿಯನ್ನು ಹಾವಂಜೆ ನಿವಾಸಿ ಜೋಸ್ನಾ ಲೂಯಿಸ್ ಎಂದು ಗುರುತಿಸಲಾಗಿದೆ.

ಕಿಚ್ಚ ಸುದೀಪ್ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯಾಗಿ ನೇಮಕ : ಪ್ರತಿ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆಯಲು‌ ನಿರ್ಧಾರ – Vishwanews24

 

ಇವರು ನಿನ್ನೆ ರಾತ್ರಿ ಕೊಳಲಗಿರಿ ಹಾವಂಜೆಯ ಸಂಬಂಧಿಕರ ಮನೆಯಲ್ಲಿ ನಡೆದ ರೋಸ್ ಸಮಾರಂಭಕ್ಕೆ ತೆರಳಿದ್ದರು.

ಅಲ್ಲಿ 8.30ರ ಸುಮಾರಿಗೆ ಏಕಾಏಕಿಯಾಗಿ ರಕ್ತದ ಒತ್ತಡ ಕಡಿಮೆಯಾದ ಪರಿಣಾಮ ಜೋಸ್ನಾ ಅವರು ಅಲ್ಲೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಜೋಸ್ನಾ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ

ಮಂಗಳೂರು : ದೇಶದ ಹಿತಕ್ಕಾಗಿ ಎನ್ ಐಎ ಜತೆ ಉಗ್ರ ನಿರ್ಮೂಲನಕ್ಕೆ ಸಹಕರಿಸಿ  : ಶಾಸಕ ಡಾ. ಭರತ್ ಶೆಟ್ಟಿ – Vishwanews24

Leave a Reply