ಉಡುಪಿ: ವಿಡಿಯೋ ಕರೆ ರೆಕಾರ್ಡ್‌ ಮಾಡಿ ಹಣಕ್ಕೆ ಬೇಡಿಕೆ – ಲಕ್ಷಾಂತರ ರೂ. ವಸೂಲಿ ಮಾಡಿದ ಯುವತಿ – Vishwanews24

Featured, ಉಡುಪಿ

ಉಡುಪಿ: ವಿಡಿಯೋ ಕರೆ ರೆಕಾರ್ಡ್‌ ಮಾಡಿ ಹಣಕ್ಕೆ ಬೇಡಿಕೆ – ಲಕ್ಷಾಂತರ ರೂ. ವಸೂಲಿ ಮಾಡಿದ ಯುವತಿ

ಉಡುಪಿ: ವಿಡಿಯೋ ಕರೆ ರೆಕಾರ್ಡ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಲಕ್ಷಾಂತರ ರೂ.ಗಳನ್ನು ವಸೂಲು ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಸಂತೆಕಟ್ಟೆಯ ಅಸ್ಟರ್‌ ಅವರು ಮೋಸ ಹೋಗಿದ್ದು, ಅವರಿಗೆ ಡೇಟಿಂಗ್‌ ಆ್ಯಪ್‌ನಲ್ಲಿ ಸಾಚಿ ಜೈನ್‌ ಎಂಬಾಕೆ ಪರಿಚಯವಾಗಿದ್ದಾಳೆ. ಬಳಿಕ ಆಕೆ ವಾಟ್ಸಾಪ್‌ನಲ್ಲಿ ಅಸ್ಟರ್‌ ಅವರೊಂದಿಗೆ ಚಾಟಿಂಗ್‌ ಮತ್ತು ವಿಡಿಯೋ ಕರೆ ಮಾಡುತ್ತಿದ್ದಳು. ಆಕೆ ತಾನು ಕರೆ ಮಾಡಿ ಅದನ್ನು ರೆಕಾರ್ಡ್ ಮಾಡುತ್ತಿದ್ದಳು.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಫಾ ಪೈಚಾರು ಎನ್ಐಎ ವಶಕ್ಕೆ – Vishwanews24

ಕೆಲ ದಿನಗಳ ಬಳಿಕ ಆಕೆ ಅಸ್ಟರ್‌ ಅವರಿಗೆ ಕಳುಹಿಸಿ ಹಣ ಕಳುಹಿಸುವಂತೆ ಬೇಡಿಕೆ ಇಟ್ಟಿದ್ದಾಳೆ. ಅದರಂತೆ ಅಸ್ಟರ್‌ ಅವರು ಆಕೆ ತಿಳಿಸಿದ ಬ್ಯಾಂಕ್‌ ಖಾತೆಗೆ ಹಾಗೂ ಯುಪಿಐ ಐಡಿ ಗಳಿಗೆ ಹಂತ ಹಂತವಾಗಿ 11,30,106ರೂ. ಪಾವತಿಸಿದ್ದಾರೆ. ಈ ಬಗ್ಗೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply