ಉಡುಪಿ : ವಿಶಾಲ ಗಾಣಿಗ ಕೊಲೆ ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ರೂ 50,000 ಬಹುಮಾನ ಘೋಷಣೆ : ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ವಿಷ್ಣುವರ್ಧನ್ ಮಾಹಿತಿ -Vishwanews24
ಉಡುಪಿ : ವಿಶಾಲ ಗಾಣಿಗ ಕೊಲೆ ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ರೂ 50,000 ಬಹುಮಾನ ಘೋಷಣೆ : ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ವಿಷ್ಣುವರ್ಧನ್ ಮಾಹಿತಿ -Vishwanews24
ಉಡುಪಿ: ಸುಪಾರಿ ಕಿಲ್ಲರ್ ಗಳನ್ನು ತನ್ನ ಗೆಳೆಯರೆಂದು ಪರಿಚಯಿಸಿ ಅವರ ಮೂಲಕ ತನ್ನ ಪತ್ನಿ ವಿಶಾಲ ಗಾಣಿಗನನ್ನು ಪತಿ ರಾಮಕೃಷ್ಣ ಕೊಲೆ ಮಾಡಿಸಿದ್ದಾನೆ. ಕೊಲೆಗೆ ಪತಿ ಮತ್ತು ಪತ್ನಿಯ ನಡುವೆ ಸಂಬಂಧ ಸರಿ ಇಲ್ಲದೆ ಇರುವುದು ಕೊಲೆಗೆ ಕಾರಣವಾಗಿದೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರು ಹೇಳಿದರು.
ವಿಶಾಲ ಗಾಣಿಗ ಅವರ ಕೊಲೆ ಪ್ರಕರಣದ ಕುರಿತು ಮಾಧ್ಯಮಗೊಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಪತಿ ರಾಮಕೃಷ್ಣ ಗಾಣಿಗನನ್ನು ಈಗಾಗಲೇ ಬಂಧಿಸಿ ಜುಲೈ 23ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದು ಇನ್ನೋರ್ವ ಆರೋಪಿ ಉತ್ತರ ಪ್ರದೇಶದ ಸ್ವಾಮಿನಾಥ ನಿಶಾದ (38) ಎಂಬಾತನನ್ನು ಗೋರಖ್ಪುರದಲ್ಲಿ ಬಂಧಿಸಿ ಉಡುಪಿಗೆ ಕರೆತರಲಾಗಿದೆ. ಇದರೊಂದಿಗೆ ಇನ್ನೋರ್ವ ಆರೋಪಿಯ ಬಗ್ಗೆ ಮಾಹಿತಿ ಲಭಿಸಿದ್ದು ಆದಷ್ಟೂ ಬೇಗ ಬಂಧಿಸಲಾಗುವುದು ಎಂದರು.
ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಕುಮ್ರಗೋಡು ಗ್ರಾಮದ ಮಿಲನ ರೆಸಿಡೆನ್ಸಿಯ ಪ್ಲಾಟ್ ನಂಬ್ರ-21ರಲ್ಲಿ ವಿಶಾಲ ಗಾಣಿಗೆ ಇವರು ಒಂಟಿಯಾಗಿದ್ದ ಸಮಯದಲ್ಲಿ ಜುಲೈ 12 ರಂದು ಮಧ್ಯಾಹ್ನದ ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಫ್ಲ್ಯಾಟಿಗೆ ಪ್ರವೇಶ ಮಾಡಿ, ವಿಶಾಲ ಗಾಣಿಗರವರನ್ನು ಎಲೆಕ್ನಿಕ್ ವಯರ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ, ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿರುವ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿಈ ಕೊಲೆ ಪ್ರಕರಣವನ್ನು ಭೇದಿಸಲು ಸುಧಾಕರ ಎಸ್. ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ ವಿಭಾಗ, ಉಡುಪಿ ರವರ ನಿರ್ದೇಶನದಂತೆ ಅನಂತ ಪದ್ಮನಾಭ, ಸಿಪಿಐ ಬ್ರಹ್ಮಾವರ ಮತ್ತು ಪಿ.ಎಸ್.ಐ ರವರಾದ ಗುರುನಾಥ ಬಿ ಹಾದಿಮನಿ ರವರ ತಂಡ ಮಂಜುನಾಥ, ಪಿ.ಐ, ಮಣಿಪಾಲ ಮತ್ತು ಪಿ.ಎಸ್.ಐ ರವರಾದ ರಾಜಶೇಖರ ವಂದಲಿ ಶರಣಗೌಡ, ಸಿಪಿಐ, ಮಲ್ಪೆ ವೃತ್ತ ಮತ್ತು ಪಿ.ಎಸ್.ಐ ರವರಾದ ಮಧು ಸಂಪತ್ಕುಮಾರ್ ಎ. ಸಿಪಿಐ ಕಾರ್ಕಳ ಮತ್ತು ಪಿ.ಎಸ್.ಐ. ಠವರಾದ ರಾಘವೇಂದ್ರ ಸಿ ಮತ್ತು ಶ್ರೀಧರ್ ನಾಯ್ಕ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಆರ್.ಡಿ.ಪಿ.ಯ ತಾಂತ್ರಿಕ ತಂಡ ಒಳಗೊಂಡಂತೆ ಒಟ್ಟು 5 ವಿಶೇಷ ತಂಡಗಳನ್ನು ಆರೋಪಿಗಳ ಪತ್ತೆಗೆ ರಚಿಸಲಾಗಿತ್ತು.
ಆರೋಪಿಗಳ ಪತ್ತೆಗೆ ವಿಶೇಷ ತಂಡದ ಅಧಿಕಾರಿಗಳಾದ ಮಂಜುನಾಥ ಪಿ.ಐ ಮಣಿಪಾಲ, ಶರಣ ಗೌಡ, ಸಿಪಿಐ ಮಲ್ಪೆ, ಮಧು ಪಿ.ಎಸ್.ಐ ಕಾರ್ಕಳ ಮತ್ತು ರಾಜಶೇಖರ ವಂದಲಿ, ಪಿ.ಎಸ್.ಐ ಮಣಿಪಾಲ ಇವರುಗಳು ತಾಂತ್ರಿಕ ಸಾಕ್ಷಾ ಧಾರಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಯತ್ನ ನಡೆಸಿ ನಂತರ ಬೇರೆ ರಾಜ್ಯಗಳಿಗೂ ತೆರಳಿ ನಂತರ ಮಹತ್ವದ ಸುಳಿವಿನ ಆಧಾರದಲ್ಲಿ ಉತ್ತರ ಪ್ರದೇಶದ ಗೋರುರಕ್ಕೆ ತೆರಳಿ ಅಲ್ಲಿನ ಎಸ್.ಎಸ್.ಪಿ. ದಿನೇಶ್ ಕುಮಾರ್ ಐ.ಪಿ.ಎಸ್ ಹಾಗೂ ಅವರ SWAT ತಂಡದ ಸಹಭಾಗಿತ್ವದಲ್ಲಿ ಸಂಶಯಿತ ಆರೋಪಿ ಶ್ರೀ ಸ್ವಾಮಿನಾಥ ನಿಶಾದ ಎಂಬಾತನನ್ನು ಬಂಧಿಸಲಾಗಿದೆ
ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮೃತಳ ಗಂಡ ರಾಮಕೃಷ್ಣ ಪತ್ನಿಯ ಕೊಲೆಗೆ ಸುಪಾರಿ ನೀಡಿರುವುದು ತಿಳಿದು ಬಂದಿದೆ. ಬಳಿಕ ಆರೋಪಿ ರಾಮಕೃಷ್ಣನನ್ನು ರಾಮಕೃಷ್ಣನನ್ನು ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಶ್ರೀ ಅನಂತ ಪದ್ಮನಾಭ ಹಾಗೂ ಶ್ರೀ ಗುರುನಾಥ ಬಿ ಹಾದಿಮನಿ, ಪಿ.ಎಸ್.ಐ ರವರ ತಂಡವು ಜುಲೈ 19 ರಂದು ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ ಕಳೆದ 6 ತಿಂಗಳಿನಿಂದ ಸಂಚು ನಡೆಸಿ ಸುಫಾರಿ ಹಂತಕರಿಗೆ ಸುಮಾರು 2 ಲಕ್ಷಕ್ಕಿಂತ ಮಿಕ್ಕಿ ಹಣ ನೀಡಿ ದುಬೈಯಲ್ಲಿ ಕುಳಿತು ಪ್ಲಾನ್ಮಾಡಿ ಜುಲೈ 12 ರಂದು ಹಂತಕರನ್ನು ಮನೆಗೆ ಕಳುಹಿಸಿ ಕೊಲೆ ಮಾಡಿಸಿದ ವಿಚಾರ ಈ ವರೆಗಿನ ತನಿಖೆಯಿಂದ ತಿಳಿದು ಬಂದಿದೆ ಎಂದರು.
ಈ ಮೊದಲು ಮಾರ್ಚ್ ತಿಂಗಳಲ್ಲಿ ಊರಿಗೆ ಬಂದಿದ್ದ ರಾಮಕೃಷ್ಣ ಸುಪಾರಿ ಹಂತಕರನ್ನು ತನ್ನ ಕುಮ್ರಗೋಡಿನ ಮನೆಗೆ ಕರೆಯಿಸಿಕೊಂಡು ಗೆಳೆಯರೆಂದು ಹೆಂಡತಿಗೆ ಪರಿಚಯಿಸಿದ್ದ. ಬಳಿಕ ಯಾವುದೇ ರೀತಿಯ ಸಂಶಯ ಬರದಂತೆ ನೋಡಿಕೊಳ್ಳುವ ಸಲುವಾಗಿ ಪತ್ನಿಗೆ ಮತ್ತು ಆರೋಪಿಗಳಿಗೆ ಇಂಟರ್ ನೆಟ್ ಮೂಲಕ ಕಾಲ್ ಮಾಡಿತ್ತಿದ್ದ. ಅಲ್ಲದೆ ಈ ಮೊದಲು ಒಮ್ಮೆ ಒರ್ವ ಗೆಳೆಯನ ಮೂಲಕ ಪಾರ್ಸೆಲ್ ಕಳುಹಿಸಿದ್ದನು ಅದರಂತೆ ಜುಲೈ 12 ರಂದು ಕೂಡ ಮನೆಗೆ ತನ್ನ ಗೆಳೆಯರು ಬರಲಿದ್ದು ಗಂಗೊಳ್ಳೀಗೆ ತೆರಳೀದ್ದ ಪತ್ನಿಯನ್ನು ಒಬ್ಬಂಟಿಯಾಗಿ ವಾಪಾಸಾಗುವಂತೆ ಸೂಚಿಸಿದ್ದನು. ಅದರಂತೆ ವಾಪಾಸಾದ ಪತ್ನಿ ಕುಮ್ರಗೋಡಿನ ಮನೆಗೆ ತಲುಪಿರುವುದು ಖಾತ್ರಿ ಮಾಡಿದ ಬಳಿಕ ಹಂತಕರು ಮನೆಗೆ ತಲುಪಿದ್ದು ವಯರ್ ಉಪಯೋಗಿಸಿ ಕೊಲೆ ಮಾಡಿದ್ದಾರೆ ಎಂದರು.
ಫ್ಲ್ಯಾಟ್ ನಲ್ಲಿ ಯಾವುದೇ ಸಿಸಿ ಟಿವಿ ಕ್ಯಾಮಾರ ವ್ಯವಸ್ಥೆ ಇಲ್ಲದೆ ಇರುವುದು ತನಿಖೆಗೆ ಹಿನ್ನಡೆಯಾದರೂ ಬಳಿಕ ಜಿಲ್ಲೆಯ ವಿವಿಧ ಕಡೆಗಳ ಸಿಸಿ ಟಿವಿ ಕ್ಯಾಮಾರಾ ಹಾಗೂ ಪೊರೆನ್ಸಿಕ್ ತಂಡದ ಸತತ ತನಿಖೆಯ ಮೂಲಕ ಆರೋಪಿಯನ್ನು ಬಂಧಿಲಾಗಿದೆ ಎಂದರು. ಇನ್ನೋರ್ವ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದರು.
ಈ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ, ಸಿ.ಪಿ.ಐ., ಬ್ರಹ್ಮಾವರ, ಮಂಜುನಾಥ ಪಿ.ಐ. ಮಣಿಪಾಲ, ಶರಣಗೌಡ, ಸಿಪಿಐ, ಮಲ್ಪೆ ವೃತ್ತ, ಪ್ರಮೋದ್ ಪಿ.ಐ, ಉಡುಪಿ ನಗರ ಠಾಣೆ, ಸಂಪತ್ ಕುಮಾರ್ ಎ, ಸಿಪಿಐ ಕಾರ್ಕಳ, ಗುರುನಾಥ ಬಿ ಹಾದಿಮನಿ, ಪಿ.ಎಸ್.ಐ ಬ್ರಹ್ಮಾವರ, ಮಧು ಪಿ.ಎಸ್.ಐ ಕಾರ್ಕಳ ನಗರ, ರಾಘವೇಂದ್ರ ಪಿ.ಎಸ್.ಐ ಕಾಪು, ಶ್ರೀಧರ ನಾಯ್ಕ, ಪಿ.ಎಸ್.ಐ, ಶಂಕರನಾರಾಯಣ ಠಾಣೆ, ಶ್ರೀಮತಿ ಕೆ.ಆರ್ ಸುನಿತಾ, ಮ.ಪಿ.ಎಸ್.ಐ ಬ್ರಹ್ಮಾವರ, ಸಂತೋಷ ಬಿ.ಪಿ, ಪಿ.ಎಸ್.ಐ ಕೋಟ, ಕೃಷ್ಣಪ್ಪ ಎ.ಎಸ್.ಐ, ಬ್ರಹ್ಮಾವರ ವೃತ್ತ ಕಛೇರಿ, ಎ.ಎಸ್.ಐ ರವರಾದ ಗೋಪಾಲ ಪೂಜಾರಿ, ನಾರಾಯಣ ಕೆ.ಎಸ್. ಸುಂದರ, ಬ್ರಹ್ಮಾವರ ಠಾಣೆ ಹಾಗೂ ಸಿಬ್ಬಂದಿಯವರಾದ ಚಂದ್ರ ಶೆಟ್ಟಿ, ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ಪ್ರದೀಪ್ನಾಯಕ, ಸತೀಶ, ವಾಸುದೇವ ಪೂಜಾರಿ, ಅಶೋಕ ಮೆಂಡನ್, ರಾಘವೇಂದ್ರ, ಸಂತೋಷ ಶೆಟ್ಟಿ, ಗಣೇಶ ದೇವಾಡಿಗ, ಸಬಿತಾ, ಜ್ಯೋತಿ ಎಂ, ಶಾಂಭವಿ, ಮೊಹಮ್ಮದ್ ಅಲ್, ದಿಲೀಪ್ ಕುಮಾರ್, ರವೀಂದ್ರ ಹೆಚ್, ಪ್ರಕಾಶ, ಬಸೀರ್, ಸಂದೀಪ್ಪಿ.ಕೆ, ವಿಕ್ರಂ, ನೇತ್ರಾವತಿ, ಅಪೂರ್ವ, ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ತಂಡದ ಸಿಬ್ಬಂದಿಯವರಾದ ಶಿವಾನಂದ, ದಿನೇಶ, ನಿತಿನ್ ಹಾಗೂ ಚಾಲಕರಾದ ಶ್ರೀ ಶೇಖರ್, ಸಂತೋಷ ಪೂಜಾರಿ ಮತ್ತು ಅಣ್ಣಪ್ಪ ರವರಗಳು ಕೊಲೆ ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
