ಉಡುಪಿ: ಶಿವಮೊಗ್ಗ ಹರ್ಷನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಹಣ ಸಹಾಯ ಮಾಡಿದ ಪೇಜಾವರ ಶ್ರೀಗಳು – Vishwanews24
ಉಡುಪಿ: ಶಿವಮೊಗ್ಗ ಹರ್ಷನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಹಣ ಸಹಾಯ ಮಾಡಿದ ಪೇಜಾವರ ಶ್ರೀಗಳು – Vishwanews24
ಉಡುಪಿ: ಇತ್ತೀಚಿಗೆ ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷನ ಮನೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಮಠದ ವತಿಯಿಂದ ಶುಕ್ರವಾರ ಹರ್ಷನ ಪಾಲಕರಿಗೆ 10 ಸಾವಿರ ರೂ. ಹಸ್ತಾಂತರಿಸಲಾಯಿತು. ಬಳಿಕ ಮಾತನಾಡಿದ ಶ್ರೀಗಳು, ಹರ್ಷನ ಅಗಲುವಿಕೆಯಿಂದ ಆತನ ಹೆತ್ತವರು ಅನುಭವಿಸುತ್ತಿರುವ ನೋವು ದುಃಖದಲ್ಲಿ ನಮಗೆ ಸಹಾನುಭೂತಿ ಇದೆ. ಇಂತಹ ಹೇಯಕೃತ್ಯಗಳ ಮೂಲಕ ನಮ್ಮ ಸಂಘಟನೆಗಳ ನೈತಿಕ ಸ್ಥೈರ್ಯ ಕುಗ್ಗಿಸಲು ಪ್ರಯತ್ನಿಸುತ್ತಿರುವುದನ್ನು ಖಂಡಿಸುತ್ತೇವೆ. ಸರ್ಕಾರ ಮತ್ತು ಕಾನೂನು ಹರ್ಷನ ಸಾವಿಗೆ ನ್ಯಾಯ ಕೊಡಿಸುತ್ತೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದರು.
ಭಗವಂತನು ಈ ದುಃಖ ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ. ಸಮಾಜ, ಸಂಘ ಸಂಸ್ಥೆಗಳು, ಸಾಧು ಸಂತರು, ಸರ್ಕಾರ ಅನೇಕ ವಿಧದಲ್ಲಿ ಹರ್ಷನ ಪಾಲಕರಿಗೆ ಸಾಂತ್ವನ ನೀಡಿರುವುದನ್ನು ಕಂಡು ಸಮಾಧಾನವಾಗಿದೆ. ಇಂಥ ದುರ್ಘಟನೆಗಳು ಮುಂದೆ ನಡೆಯದಿರಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ಗೋಸಾಯಿ ಮಠದ ಸ್ವಾಮೀಜಿ, ಶ್ರೀಗಳ ಆಪ್ತರಾದ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಹಾಗೂ ಸಂಘಟನೆಗಳ ಪ್ರಮುಖರಿದ್ದರು.
