ಉಡುಪಿ ಶ್ರೀಕೃಷ್ಣ ಮಠ ಮತ್ತು ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – vishwanews24
ಉಡುಪಿ ಶ್ರೀಕೃಷ್ಣಮಠ ಮತ್ತು ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಉಡುಪಿ: ಜಿಲ್ಲೆಯ ಕಾಪು ಹೊಸ ಮಾರಿಗುಡಿ ಮತ್ತು ಉಡುಪಿಯ ಶ್ರೀಕೃಷ್ಣಮಠಕ್ಕೆ ಇವತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿದರು. ಕುಟುಂಬ ಸಮೇತ ಆಗಮಿಸಿದ ಜೋಶಿ ಎರಡೂ ಕಡೆ ದೇವರ ದರ್ಶನ ಮಾಡಿದರು.
ಕೃಷ್ಣಮಠದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಜೋಶಿ, ಇದೊಂದು ಪ್ರೇರಣಾ ಸ್ಥಳ. ಭಗವದ್ಗೀತೆ ಸಾರ್ವಕಾಲಿಕ ಸತ್ಯ. ಕೃಷ್ಣಮಠ ಅತ್ಯಂತ ಪುರಾತನ ದೇವಸ್ಥಾನಗಳಲ್ಲೊಂದಾಗಿದೆ.ಇಲ್ಲಿ ಪೇಜಾವರ ಶ್ರೀಗಳು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದಾರೆ. ದೇವರ ದರ್ಶನ ಮಾಡಲು ನಾನು ಕುಟುಂಬ ಸಮೇತ ಇಲ್ಲಿಗೆ ಆಗಮಿಸಿದ್ದೇನೆ ಎಂದು ಹೇಳಿದರು. ದೇವರ ದರ್ಶನಕ್ಕೆ ಆಗಮಿಸಿದ ಕೇಂದ್ರ ಸಚಿವರನ್ನು ಮಠದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ
ಗೌರವಿಸಲಾಯಿತು.
ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ; ನೂತನ ಮೇಯರ್ ಆಗಿ ಮಂಗೇಶ್ ಪವಾರ್ ಆಯ್ಕೆ – vishwanews24
