ಉಡುಪಿ: ಸತೀಶ್ ಜಾರಕಿಹೋಳಿ ಹಿಂದೂ ಅಶ್ಲೀಲ ಪದ ಹಿಂದೂ ಭಾವನೆ ವಿಚಾರ ಮನಸ್ಸಿಗೆ ಘಾಸಿಯಾಗುವ ಹೇಳಿಕೆ : ಸಿಎಂ ಬೊಮ್ಮಾಯಿ – Vishwanews24
ಉಡುಪಿ: ಸತೀಶ್ ಜಾರಕಿಹೋಳಿ ಹಿಂದೂ ಅಶ್ಲೀಲ ಹೇಳಿಕೆ : ಕ್ಷೋಭೆಭರಿತ ಹೇಳಿಕೆ , ಭಾರತದ ಭಾವನೆಗೆ ಧಕ್ಕೆಯಾಗಿದೆ’ : ಸಿಎಂ ಬೊಮ್ಮಾಯಿ
ಉಡುಪಿ : ಹಿಂದೂ ಎನ್ನವುದು ಭಾರತೀಯ ಪದವಲ್ಲ, ಅದು ಪರ್ಷಿಯನ್ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದವಾಗಿದೆ ಎಂದು ಸತೀಶ್ ಜಾರಕಿಹೋಳಿ ಹೇಳಿದ್ದು, ಈ ಹೇಳಿಕೆ ವಿರುದ್ದ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ಸತೀಶ್ ಜಾರಕಿಹೋಳಿ ಹರೇ ಬರೇ ಓದಿದ ವ್ಯಕ್ತಿ. ಯಾವುದೇ ಆಳವಾದ ಅಧ್ಯಯನ ಇಲ್ಲದೆ ಮಾತನಾಡಿದ್ದಾರೆ. ಅಲ್ಪಸಂಖ್ಯಾತ ಮತ ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಅವರ ಹೇಳಿಕೆಯಿಂದ ಭಾರತದ ಭಾವನೆಗೆ ಧಕ್ಕೆಯಾಗಿದೆ ಕ್ಷೋಭೆಭರಿತ ಹೇಳಿಕೆ ಎಂಬೂದು ದೇಶದ್ರೋಹದ ಕೆಲಸ ಎಂದರು.
ಇನ್ನು ಈ ಬಗ್ಗೆ ರಾಹುಲ್ ಗಾಂಧಿ ಸಿದ್ದರಾಮಯ್ಯ ಮೌನ ಯಾಕೆ? ನಿಮ್ಮ ಮೌನ ಸತೀಶ್ ಮಾತಿಗೆ ಸಮ್ಮತಿನಾ? ಸತೀಶ್ ಇನ್ನೂ ಸಮರ್ಥನೆ ಮಾಡ್ತಾರೆ ಹುಳಿ ಹಿಂಡುವ ಕೆಲಸ ಮಾಡ್ತಾರೆ. ದೇಶದಲ್ಲಿ ಕಾಂಗ್ರೆಸ್ ಅಲ್ಪ ಸ್ಪಲ್ಪ ಉಳಿದಿದೆ. ನೆಪಮಾತ್ರದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜನ ಮೂಲೆಯ ಸ್ಥಾನ ತೋರಿಸ್ತಾರೆ. ಇದೊಂದು ಪೂರ್ವಗ್ರಹ ಹೇಳಿಕೆ ಮತ್ತು ಯೋಜನಾಬದ್ಧವಾದ ಹೇಳಿಕೆಯಾಗಿದ್ದು, ಹಿಂದೂ ಭಾವನೆ ವಿಚಾರ ಮನಸ್ಸಿಗೆ ಘಾಸಿಯಾಗುವ ಹೇಳಿಕೆ ನೀಡಿರುವುದರಿಂದ ರಾಜ್ಯದ ಜನ ಒಕ್ಕೊರಲಿನಿಂದ ಇದನ್ನು ವಿರೋಧಿಸಬೇಕು ಎಂದಿದ್ದಾರೆ.
ಉಡುಪಿ : ಮಹಿಳೆ ನಾಪತ್ತೆ – Vishwanews24
