ಉಡುಪಿ: ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ – Vishwanews24

Featured, ಉಡುಪಿ

ಉಡುಪಿ: ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ

ಉಡುಪಿ: ಯುವಕನೊಬ್ಬ ಮನೆಯ ಹೊರ ಜಗುಲಿಯ ಮೇಲೆ ಇರುವ ಪಕ್ಕಾಸಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ನಗರದ ಕುಕ್ಕಿ ಕಟ್ಟೆಯ ಪರಾಗ್ ವೈನ್ಸ್ ಹಿಂಬದಿಯ ಮನೆಯೊಂದರಲ್ಲಿ ನಡೆದಿದೆ.

ಪ್ರಶಾಂತ್ (22) ಮೃತ ಯುವಕ.

ಘಟನೆಯ ಕುರಿತು ಸ್ಥಳೀಯರು ತಕ್ಷಣ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ.

ಒಳಕಾಡು ಸ್ಥಳಕ್ಕೆ ಬಂದು ನೋಡುವಾಗ ಯುವಕ ನರಳುವ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ.

ಮಂಗಳೂರು:ಠಾಣೆಯಲ್ಲಿ ಪೊಲೀಸರ ಎದುರಿನಲ್ಲಿನಲ್ಲಿಯೇ ಮಗುವಿನ ಹತ್ಯೆಗೆ ಯತ್ನಿಸಿದ ತಂದೆ – Vishwanews24

 

ತಕ್ಷಣ ಅವರು ಯುವಕನನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ.

ಆತನನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave a Reply