ಉಡುಪಿ: ಸುರತ್ಕಲ್ ಟೋಲ್, ಹೆಜಮಾಡಿಯೊಂದಿಗೆ ವಿಲೀನ , ಎರಡು ಟೋಲ್ ಹಣವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡ್ತಾರೆ : ಸೊರಕೆ ಅರೋಪ – Vishwanews24

Featured, ಉಡುಪಿ

ಉಡುಪಿ: ಸುರತ್ಕಲ್ ಟೋಲ್, ಹೆಜಮಾಡಿಯೊಂದಿಗೆ ವಿಲೀನ , ಎರಡು ಟೋಲ್ ಹಣವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡ್ತಾರೆ : ಸೊರಕೆ ಅರೋಪ

ಉಡುಪಿ: ಸುರತ್ಕಲ್ ಟೋಲ್, ಹೆಜಮಾಡಿಯೊಂದಿಗೆ ವಿಲೀನವಾಗುತ್ತದೆ. ಆ ಬಳಿಕ ಹೆಜಮಾಡಿಯಲ್ಲೇ ಡಬಲ್ ಹಣ ಪಾವತಿಸಬೇಕು. ಸರಕಾರ ಜನರನ್ನು ಮಂಗ ಮಾಡಲು ಮುಂದಾಗಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಟೋಲ್ ಹಣವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡ್ತಾರೆ. ಆ ಮೂಲಕ ಹಗಲು ದರೋಡೆ ಮುಂದುವರೆಯುತ್ತದೆ. ಸುರತ್ಕಲ್ ನಲ್ಲಿ ಟೋಲ್ ಗೇಟ್ ಮಾತ್ರ ತೆರವಾಗುವುದು. ಆದರೆ, ಸುಂಕವನ್ನು ಹೆಜಮಾಡಿಯಲ್ಲಿ ಪಾವತಿಸಬೇಕು. ಈ ಬಗ್ಗೆ ಯಾರೂ ಕೂಡ ಪ್ರಶ್ನೆ ಮಾಡುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಮಂಗಳೂರು : ಫೂಡ್ ಪಾಯ್ಸನ್ – ಒಂದೇ ಕುಟುಂಬದ ನಾಲ್ವರು ಅಸ್ವಸ್ಥ – Vishwanews24

Leave a Reply