ಉಡುಪಿ : ಸೈನಿಕರ ತ್ಯಾಗದಿಂದ ದೇಶದ ಅಖಂಡ ಬೆಳವಣಿಗೆ : ಸಚಿವ ಸುನೀಲ್ ಕುಮಾರ್ -Vishwanews24
ಉಡುಪಿ : ಸೈನಿಕರ ತ್ಯಾಗದಿಂದ ದೇಶದ ಅಖಂಡ ಬೆಳವಣಿಗೆ : ಸಚಿವ ಸುನೀಲ್ ಕುಮಾರ್ -Vishwanews24
ಉಡುಪಿ : ಅಖಂಡ ಭಾರತದ ರಕ್ಷಣೆಯ ಹೊಣೆಗಾರಿಕೆಯನ್ನು ಹೊತ್ತಿರುವ ನಮ್ಮ ದೇಶದ ಸೈನಿಕರ ತ್ಯಾಗ, ಉತ್ಸಾಹ, ಪ್ರಮಾಣಿಕತೆ ಎಲ್ಲಾ ಭಾರತೀಯರಿಗೆ ಮಾದರಿಯಾಗಿದ್ದು, ಸೈನಿಕರ ಇಂತಹ ಕರ‍್ಯ ಚಟುವಟಿಕೆಗಳಿಂದ ಭಾರತ ಇಂದು ಅಖಂಡವಾಗಿ ಬೆಳೆದಿದೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಇಂದು ಅಜ್ಜರಕಾಡು ನ ಹುತಾತ್ಮ ಸೈನಿಕರ ಯುದದ ಸ್ಮಾರಕ ಬಳಿ, ಹುತಾತ್ಮರಿಗೆ ಗೌರವ ಸಮರ್ಪಣೆ ನೆರವೇರಿಸಿ ಮಾತನಾಡಿದರು.
ಅಮೃತ ಮಹೋತ್ಸವ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಕರೆಯಂತೆ , ನವ ಭಾರತ ಸಂಕಲ್ಪ ನಿರ್ಮಾಣದಡಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕಿದೆ ಎಂದ ಅವರು, ನಿವೃತ್ತ ಸೈನಿಕರ ಬೇಡಿಕೆಗಳ ಕುರಿತ ಮನವಿಯನ್ನು ಜಿಲ್ಲಾಡಳಿತವು ಗಂಭೀರವಾಗಿ ತೆಗೆದುಕೊಂಡು ತಕ್ಷಣದಲ್ಲಿ ಅದಕ್ಕೆ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.
ನಂತರ ಹುತಾತ್ಮ ಸ್ಮಾರಕ ಆವರಣದಲ್ಲಿ ಸಚಿವರು ಗಿಡಗಳನ್ನು ನೆಟ್ಟರು.
ಉಡುಪಿ ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್,ಎಸ್ಪಿ ವಿಷ್ಣುವರ್ಧನ್, ಕರಾವಳಿ ಕಾವಲು ಪಡೆ ಎಸ್ಪಿ ನಿಖಿಲ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲೆಯ ನಿವೃತ್ತ ಯೋಧರು ಉಪಸ್ಥಿತರಿದ್ದರು.
