ಉಡುಪಿ : ಸ್ವಚ್ಛತಾ ಕಾರ್ಯಕರ್ತನ ಮೇಲೆ ಇಬ್ಬರು ಯುವತಿಯರು ಸೇರಿ ಮೂವರಿಂದ ಹಲ್ಲೆ – Vishwanews24

Featured, ಉಡುಪಿ

ಉಡುಪಿ : ಸ್ವಚ್ಛತಾ ಕಾರ್ಯಕರ್ತನ ಮೇಲೆ ಇಬ್ಬರು ಯುವತಿಯರು ಸೇರಿ ಮೂವರಿಂದ ಹಲ್ಲೆ – Vishwanews24

ಉಡುಪಿ, : ಸ್ವಚ್ಛತಾ ಕಾರ್ಮಿಕರೊಬ್ಬರ ಮೇಲೆ ಇಬ್ಬರು ಯುವತಿಯರು ಸೇರಿದಂತೆ ಮೂವರು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಉಡುಪಿಯ ಅಂಬಲಪಾಡಿಯಲ್ಲಿ ನಡೆದಿದೆ.

ಅಂಬಲಪಾಡಿಯ ಅಪಾರ್ಟ್‌ಮೆಂಟ್‌ ಬಳಿ ಈ ಘಟನೆ ನಡೆದಿದೆ.

ಸ್ವಚ್ಛತಾ ಕಾರ್ಯಕರ್ತ ಸುರೇಶ್‌ ಅವರು ನೀಡಿದ ದೂರಿನ ಪ್ರಕಾರ, “ಸುರೇಶ್‌ ಅವರು ಉಡುಪಿ ನಗರಸಭೆಯ ವ್ಯಾಪ್ತಿಯ ಸ್ವಚ್ಛತಾ ಕೆಲಸ ಮಾಡುತ್ತಿದ್ದು, ಎಪ್ರಿಲ್‌ 22ರಂದು ಅಂಬಲಪಾಡಿಯ ಅಪಾರ್ಟ್ಮೆಂಟ್‌ವೊಂದರ ಬಳಿ ಕಸ ವಿಲೇವಾರಿ ವಾಹನದ ಮೂಲಕ ತೆರಳುತ್ತಿದ್ದರು. ಈ ವೇಳೆ ಬೈಕ್‌‌ನಲ್ಲಿ ಬಂದ ಮೂವರು ( ಇಬ್ಬರು ಯುವತಿಯರು ಹಾಗೂ ಓರ್ವ ಯುವಕ) ಕಸ ವಿಲೇವಾರಿ ವಾಹನವನ್ನು ತಡೆದು ನಿಲ್ಲಿಸಿ ಸುರೇಶ್‌ ಅವರ ಮೇಲೆ ಹಲ್ಲೆ ನಡೆಸಿದ್ದು ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸುರೇಶ್‌ ಅವರ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾಜಿ ಸಚಿವ ಆರ್ ವಿ ದೇಶಪಾಂಡೆಗೆ ಕೊರೋನಾ ಪಾಸಿಟಿವ್ -Vishwanews24