ಉಡುಪಿ ಹಿಜಾಬ್ ವಿವಾದ : ಹೈಕೋರ್ಟ್ ತೀರ್ಪು ಬರೋವರೆಗೆ ಪಿಯು ಪರೀಕ್ಷೆ ಮುಂದೂಡಿ : ಡಿಡಿಪಿಐಗೆ ಹಿಜಾಬ್ ಹೋರಾಟಗಾರ್ತಿಯರ ಮನವಿ – Vishwanews24
ಉಡುಪಿ ಹಿಜಾಬ್ ವಿವಾದ : ಹೈಕೋರ್ಟ್ ತೀರ್ಪು ಬರೋವರೆಗೆ ಪಿಯು ಪರೀಕ್ಷೆ ಮುಂದೂಡಿ : ಡಿಡಿಪಿಐಗೆ ಹಿಜಾಬ್ ಹೋರಾಟಗಾರ್ತಿಯರ ಮನವಿ – Vishwanews24
ಉಡುಪಿ: ಹಿಜಾಬ್ ಅನುಮತಿ ಕೋರಿ ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಲ್ಲಿ ಇಂದು 10ನೇ ದಿನ ನಡೆಸುತ್ತಿದೆ.
ಈ ಬೆನ್ನಲ್ಲೇ ಹೈಕೋರ್ಟ್ ತೀರ್ಪು ಬರೋವರೆಗೆ ಪಿಯು ಪರೀಕ್ಷೆ ಮುಂದೂಡುವಂತೆ ಡಿಡಿಪಿಐಗೆ ಹಿಜಾಬ್ ಹೋರಾಟಗಾರ್ತಿಯರು ಮನವಿ ಮಾಡಿದ್ದಾರೆ.
ಇಂದು ಉಡುಪಿಯ ಡಿಡಿಪಿಐ ಭೇಟಿ ಮಾಡಿದಂತ ಹಿಜಾಬ್ ಹೋರಾಟಗಾರ್ತಿಯರು, ಪಿಯು ಇಲಾಖೆಯ ಪರೀಕ್ಷೆಗಳನ್ನು ಹಿಜಾಬ್ ತೀರ್ಪು ಬರೋವರೆಗೆ ಮುಂದೂಡುವಂತೆ ಮನವಿ ಮಾಡಿದ್ದಾರೆ.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ವಿದ್ಯಾರ್ಥಿನಿಯರು, ಹೈಕೋರ್ಟ್ ತೀರ್ಪು ಬರುವವರೆಗೆ ಪಿಯು ಪರೀಕ್ಷೆಯನ್ನು ಮುಂದೂಡಿಕೆ ಮಾಡುವಂತೆ ಡಿಡಿಪಿಐ ಮೂಲಕ, ಸರ್ಕಾರಕ್ಕೆ ಮನವಿ ಮಾಡಿರೋದಾಗಿ ತಿಳಿಸಿದರು.