ಉಡುಪಿ : ಹಿರಿಯ ನಾಗರಿಕರು ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಬೇಕು : ನ್ಯಾ. ಶರ್ಮಿಳಾ ಎಸ್ – Vishwanews24

Featured, ಉಡುಪಿ

ಉಡುಪಿ : ಹಿರಿಯ ನಾಗರಿಕರು ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಬೇಕು : ನ್ಯಾ. ಶರ್ಮಿಳಾ ಎಸ್ – Vishwanews24

ಉಡುಪಿ: ಸರಕಾರ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು,
ಅರ್ಹ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಯೋಜನೆಯ ನೆರವು ಸಮರ್ಪಕವಾಗಿ ಸಿಗದೇ ಇದ್ದಾಗ ಮತ್ತು ಅಧಿಕಾರಿಗಳಿಂದ
ದೌರ್ಜನ್ಯಕ್ಕೊಳಗಾದಾಗ ಕಾನೂನು ಸೇವಾ ಪ್ರಾಧಿಕಾರದ ಸಹಾಯ ಪಡೆಯಬಹುದಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ
ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್ ಹೇಳಿದರು.

ಅವರು ಅಕ್ಟೋಬರ್ ೦೩ ರಂದು ಹೊಸಬೆಳಕು ವೃದ್ಧಾಶ್ರಮ, ಸರಳಬೆಟ್ಟು ಮಣಿಪಾಲ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ
ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ
ಇಲಾಖೆ, ಜಿಲ್ಲಾ ವಕೀಲರ ಸಂಘ ಮತ್ತು ಇತರೆ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾದ ೭೫ನೇ ಸ್ವಾತಂತ್ರ್ಯೋತ್ಸವಅಮೃತ ಮಹೋತ್ಸವದ ಅಂಗವಾಗಿ ‘ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಹಕ್ಕುಗಳು’ ಕುರಿತಾದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು
ಉದ್ಘಾಟಿಸಿ ಮಾತನಾಡಿದರು.

ವಕೀಲೆ ಅಮೃತಾ ಕಲಾ ಮಾತನಾಡಿ, ಅಂಗವಿಕಲ ಹಕ್ಕುಗಳ ಕುರಿತು ಕಾನೂನು ಸಲಹೆ ನೀಡಿ ವಿಕಲಚೇತನರನ್ನು ಗೌರವಯುತವಾಗಿ ಕಾಣಬೇಕು
ಎಂದು ತಿಳಿಸಿದರು. ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ ಮಾತನಾಡಿ ಹಿರಿಯ ನಾಗರಿಕರ ರಕ್ಷಣಾ ಕಾನೂನಿನ ಕುರಿತು ಮಾಹಿತಿ ನೀಡಿ
ಹಿರಿಯರನ್ನು ಕುಟುಂಬದವರು ನಿರ್ಲಕ್ಷಿಸಬಾರದು ಅವರ ಪಾಲನೆ, ಪೋಷಣೆ ಹಾಗೂ ರಕ್ಷಣೆ ಅವರ ಮಕ್ಕಳ ಆದ್ಯ ಕರ್ತವ್ಯವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಡಿ.ಆರ್.ಸಿ ನೋಡಲ್ ಅಧಿಕಾರಿ ಜಯಶ್ರೀ, ಹೊಸಬೆಳಕು ಆಶ್ರಮದ ಸಂಚಾಲಕಿ ತನುಲಾ ತರುಣ್, ವಿನಯಚಂದ್ರ ಸಾಸ್ತಾನ,
ಇಲಾಖಾ ಅಧಿಕಾರಿಗಳು, ವೃದ್ಧಾಶ್ರಮವಾಸಿಗಳು, ವಿ.ಆರ್.ಡಬ್ಲೂö್ಯರವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ ಹಿರಿಯ ನಾಗರಿಕರ ಸಹಾಯವಾಣಿಯ ಗಣೇಶ್ ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.