ಉಡುಪಿ: ಹುಲಿ ಕುಣಿತಕ್ಕೆ ಮನಸೋತ ಯತ್ನಾಳ್ ; ಹುಲಿ ವೇಷಧಾರಿಗಳೊಂದಿಗೆ ಭರ್ಜರಿ ಸ್ಟೆಪ್ – vishwanews24

Featured, ಉಡುಪಿ

ಉಡುಪಿ: ಹುಲಿ ಕುಣಿತಕ್ಕೆ ಮನಸೋತ ಯತ್ನಾಳ್ ; ಹುಲಿ ವೇಷಧಾರಿಗಳೊಂದಿಗೆ ಭರ್ಜರಿ ಸ್ಟೆಪ್

ಉಡುಪಿ: ಹುಲಿ ಕುಣಿತಕ್ಕೆ ಮನಸೋತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹುಲಿ ವೇಷಧಾರಿಗಳೊಂದಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ಗಣೇಶೋತ್ಸವ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ವಾರಂಬಳ್ಳಿ ಫ್ರೆಂಡ್ಸ್ ವತಿಯಿಂದ ಆಯೋಜಿಸಿದ್ದ ಹುಲಿವೇಷದ ಊದು ಪೂಜೆಯಲ್ಲಿ ಶಾಸಕ ಯತ್ನಾಳ್ ಭಾಗಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಹುಲಿ ವೇಷಧಾರಿಗಳ ವಿಶೇಷ ಕುಣಿತವನ್ನು ಕಂಡು ಮೆಚ್ಚಿದ ಯತ್ನಾಳ್, ತಾಸೆಯ ಪೆಟ್ಟಿಗೆಗೆ ಹೆಜ್ಜೆ ಹಾಕಿದ್ದಾರೆ. ಹುಲಿ ವೇಷಧಾರಿಗಳೊಂದಿಗೆ ಸೇರಿಕೊಂಡು ಕುಣಿದ ಯತ್ನಾಳ್ ಅವರ ವಿಡಿಯೋ ಇದೀಗ ಗಮನ ಸೆಳೆಯುತ್ತಿದೆ.

ಮಂಗಳೂರು: ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ  – vishwanews24

Leave a Reply