ಉಡುಪಿಯ MGM ಕಾಲೇಜಿನಲ್ಲಿ ಇಂದಿನಿಂದ ಎರಡು ದಿನಗಳ ಪುಸ್ತಕೋತ್ಸವ -Vishwanews24
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಇಂದಿನಿಂದ ಎರಡು ದಿನಗಳ ಪುಸ್ತಕೋತ್ಸವ -Vishwanews24
ಉಡುಪಿ :ವಿದ್ಯಾರ್ಥಿಗಳಲ್ಲಿ ಓದಿನ ಹವ್ಯಾಸ ಬೆಳೆಸುವ ಬರಹಗಾರರಿಗೆ ಬೆಂಬಲ ಕೊಡುವ ಉದ್ದೇಶದಿಂದ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಎರಡು ದಿನಗಳ ಪುಸ್ತಕೋತ್ಸವ ಉದ್ಘಾಟನೆಯಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಎಂಜಿಎಂ ಪುಸ್ತಕೋತ್ಸವವನ್ನು ಉದ್ಘಾಟನೆ ಮಾಡಿದರು.
ನಮ್ಮ ಮಕ್ಕಳಲ್ಲಿ ಪುಸ್ತಕ ಸಂಸ್ಕೃತಿಯನ್ನು ಸೃಷ್ಟಿಸುವ ಹಿನ್ನೆಲೆಯಲ್ಲಿ ಪ್ರತಿ ಕಾಲೇಜುಗಳು ಇಂತಹ ಪುಸ್ತಕೋತ್ಸವ ಮಾಡಬೇಕು. ಇಂದಿನ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಓದುವ ಹವ್ಯಾಸ ಬೆಳೆಸುವ ಅವಶ್ಯಕತೆ ಇದೆ. ಬರಹಗಾರರು,ಪ್ರಕಾಶಕರ ದೃಷ್ಟಿಯಿಂದ ಕೂಡಾ ಪುಸ್ತಕೋತ್ಸವ ಉತ್ತಮ ನಡೆ. ಉಡುಪಿಯ ಎಂ.ಜಿ.ಎಂ ಕಾಲೇಜು ಮುಂದಡಿ ಇಟ್ಟಿದೆ. ಜಿಲ್ಲೆಯ ರಾಜ್ಯದಎಲ್ಲಾ ಕಾಲೇಜುಗಳಲ್ಲಿ ವರ್ಷಕ್ಕೊಂದು ಪುಸ್ತಕೋತ್ಸವ ನಡೆಯಬೇಕು ಎಂದು ಕರೆ ನೀಡಿದರು.
ಸಿಡಿ ಪ್ರಕರಣ : ಪೊಲೀಸ್ ವಿಚಾರಣೆಗೆ ಹಾಜರಾದ ದಿನೇಶ್ ಕಲ್ಲಹಳ್ಳಿ -Vishwanews24
ನವಕರ್ನಾಟಕ, ಮಣಿಪಾಲ್ ಯೂನಿವರ್ಸಲ್ ಪ್ರೆಸ್, ಭಾರತ್ ಬುಕ್ ಮಾರ್ಕ್, ಬಿಬ್ಲಿಯೋಸ್, ಸ್ಕೂಲ್ ಬುಕ್ ಕಂಪೆನಿ, ಬಿಳಿಕಲ್ಲು ಪ್ರಕಾಶನ ಸೇರಿದಂತೆ ವಿವಿಧ ಮಳಿಗೆಗಳು ಲಭ್ಯವಿದ್ದು, ಕಾಲೇಜಿನ ಆಸಕ್ತ ವಿದ್ಯಾರ್ಥಿಗಳು, ಸಾರ್ವಜನಿಕರು ಈಗಾಗಲೇ ಪುಸ್ತಕ ಖರೀದಿಯಲ್ಲಿ ತೊಡಗಿದ್ದಾರೆ. ಶಾಲೆ, ಕಾಲೇಜುಗಳಿಗೆ, ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಪುಸ್ತಕಗಳು ಸಿಗಲಿವೆ.
ಪುಸ್ತಕೋತ್ಸವದಲ್ಲಿ ಗ್ರಂಥಾಲಯ ಮತ್ತು ಪತ್ರಿಕೋದ್ಯಮ ವಿಭಾಗವು ವಿಶೇಷ ಮಳಿಗೆಯೊಂದನ್ನು ತೆರೆದಿದೆ. ಖರೀದಿಸಿದ ಯಾವುದೇ ಹೊಸ ಪುಸ್ತಕವನ್ನು ಅಲ್ಲಿ ದಾನ ಮಾಡಬಹುದು.ದಾನ ಮಾಡಲು ಹೊಸ ಪುಸ್ತಕವೇ ಆಗಬೇಕೆಂದಿಲ್ಲ. ನೀವು ಈಗಾಗಲೇ ಕೊಂಡು ಓದಿರುವಂತದ್ದಾದರೂ ಪರವಾಗಿಲ್ಲ. ಹೀಗೆ ಒಟ್ಟಾದ ಪುಸ್ತಕಗಳನ್ನು ನಾವು ಉಡುಪಿಯ ಕನ್ನಡ ಶಾಲೆಗಳಿಗೆ ಹಂಚಲಿದ್ದೇವೆ. ಈ ಮೂಲಕ ಪ್ರಾಥಮಿಕ ವಿದ್ಯಾರ್ಥಿಗಳಿಂದಲೇ ಓದುವ ಹವ್ಯಾಸ ಬೆಳೆಸುವ ಪ್ರಯತ್ನವನ್ನು ಎಂಜಿಎಂ ಕಾಲೇಜು ಮಾಡುತ್ತಿದೆ ಎಂದು ಮುಖ್ಯ ಗ್ರಂಥಪಾಲಕ ಕಿಶೋರ್ ಎಚ್. ವಿ ಹೇಳಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ನಾಯಕ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಐಕ್ಯುಎಸಿ ಸಂಯೋಜಕ ಪ್ರೊ. ಅರುಣ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ್ ಕಾರ್ಲ, ಮುಖ್ಯ ಗ್ರಂಥಪಾಲಕ ಕಿಶೋರ್ ಎಚ್. ವಿ ಉಪಸ್ಥಿತರಿದ್ದರು. ಮಾರ್ಚ್ 5 ಮತ್ತು 6ರಂದು ಬೆಳಿಗ್ಗೆ 9 ರಿಂದ ರಾತ್ರಿ 8ರ ವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಮಂಗಳೂರು: ಉಜಿರೆ ಎಸ್ ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿನಿ ಶ್ರೇಯಾ ರೈ ದುಬೈನಲ್ಲಿ ಕೋವಿಡ್ ಗೆ ಬಲಿ -Vishwanews24
