ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶದಲ್ಲಿ ಬೆಸ್ಟ್ ಮುಖ್ಯಮಂತ್ರಿ – Vishwanews24

Featured, ದೇಶ

ಉತ್ತರ ಪ್ರದೇಶ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶದಲ್ಲಿ ಬೆಸ್ಟ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಂಡಿಯಾ ಟುಡೇ ನಡೆಸಿದ “ಮೂಡ್ ಆಫ್ ದಿ ನೇಶನ್” ಸಮೀಕ್ಷೆಯಲ್ಲಿ ಈ ವಿಷಯ ತಿಳಿದು ಬಂದಿದೆ.  ಸಮೀಕ್ಷೆ ನಡೆಸಲಾದ ಉತ್ತರ ಪ್ರದೇಶದ ~2600 ಮಂದಿಯ ಪೈಕಿ, 40% ನಷ್ಟು ಜನ ಯೋಗಿ ಆದಿತ್ಯನಾಥರನ್ನು ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎಂದಿದ್ದಾರೆ. ತೆಲಂಗಾಣದ ಕೆ ಚಂದ್ರಶೇಖರ್ ರಾವ್ ಬಿಹಾರದ ನಿತೀಶ್ ಕುಮಾರ್ ಒಡಿಶಾದ ನವೀನ್ ಪಟ್ನಾಯಕ್, ಬಂಗಾಳದ ಮಮತಾ ಬ್ಯಾನರ್ಜಿ ಸಮೀಕ್ಷೆಯಲ್ಲಿದ್ದ ಇತರ ಮುಖ್ಯಮಂತ್ರಿಗಳಾಗಿದ್ದಾರೆ.

2017 ರ ಆಗಸ್ಟ್ ನಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಶೇಕಡ 30 ರಷ್ಟು ಜನರು ಯೋಗಿ ರನ್ನು ಅತ್ಯುತ್ತಮ ಮುಖ್ಯಮಂತ್ರಿಯಾಗಿದ್ದರು. ಇದೀಗ ನಡೆಸಲಾದ ಮತ್ತೊಂದು ಸಮೀಕ್ಷೆಯಲ್ಲಿ ಯೋಗಿ ಜನಪ್ರಿಯತೆ ಇತ್ತಷ್ಟು ಹೆಚ್ಚಿರುವುದು ಕಂಡು ಬಂದಿದೆ.

ಲೋಕಸಭಾ ಚುನಾವಣೆಗೂ ಮುನ್ನ ದೇಶದ ಜನರ ರಾಜಕೀಯ ಮೂಡ್ ಹೇಗಿದೆ ಎಂದು ತಿಳಿಯಲು ಇಂಡಿಯಾ ಟುಡೇ ಈ ಸಮೀಕ್ಷೆ ನಡೆಸಿದೆ.  ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥರ ಸಾಧನೆಯನ್ನು ಶೇಕಡ 40ರಷ್ಟು ಮಂದಿ ಮೆಚ್ಚಿಕೊಂಡರೆ, ಶೇಕಡ 17ರಷ್ಟು ಮಂದಿ ದಿ ಬೆಸ್ಟ್ ಎಂದಿದ್ದಾರೆ.

5 ಅಂಕಗಳ ರೇಟಿಂಗ್ ನಲ್ಲಿ, ಯೋಗಿ ಸರಕಾರಕ್ಕೆ 3.57 ಅಂಕಗಳನ್ನು ಇಂಡಿಯಾ ಟುಡೇ ನೀಡಿದೆ.