ಉತ್ತರ ಪ್ರದೇಶದಲ್ಲಿ ಜೈಷ್‌ ಸಂಪರ್ಕ ಹೊಂದಿರುವ ಇಬ್ಬರು ಶಂಕಿತ ಉಗ್ರರ ಬಂಧನ – Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ : ಉತ್ತರ ಪ್ರದೇಶದಲ್ಲಿ ಪಾಕಿಸ್ತಾನ ಮೂಲದ ಜೈಷ್ ಏ ಮೊಹಮ್ಮದ್ ಸಂಘಟನೆಗೆ ಸೇರಿದವರು ಎನ್ನಲಾದ ಇಬ್ಬರು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಜಮ್ಮುಕಾಶ್ಮೀರದವರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬನಾದ ಶಾಹ್ ನವಾಜ್ ಅಹ್ಮದ್, ಜಮ್ಮುಕಾಶ್ಮೀರದ ಕುಲ್ಗಾಮದವನು. ಈತ ಜೈಷೆ ಸಂಘಟನೆಗೆ ಯುವಕರನ್ನು ನೇಮಕ ಮಾಡುವ ಕೆಲಸ ಮಾಡುತ್ತಿದ್ದ. ಜೊತೆಗೆ ಈತ ಗ್ರೆನೇಡ್ ಎಕ್ಸ್ ಪರ್ಟ್ ಕೂಡ ಆಗಿದ್ದಾನೆ ಎನ್ನಲಾಗಿದೆ. ಮತ್ತೋರ್ವ ಬಂಧಿತ ಅಖೀಬ್ ಅಹ್ಮದ್ ಮಲಿಕ್ ಪುಲ್ವಾಮಾ ನಿವಾಸಿ ಎಂದು ಹೇಳಲಾಗುತ್ತಿದೆ.

ಬಂಧಿತ ಶಾನವಾಜ್ ಪುಲ್ವಾಮಾ ದಾಳಿಯ ಹೊಣೆ ಹೊತ್ತಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಹೊಸದಾಗಿ ನೇಮಕಗೊಂಡಿದ್ದಾನೆ. ಪುಲ್ವಾಮಾ ದಾಳಿಗೂ ಮುನ್ನ ಹಾಗೂ ನಂತರ ಬಂಧಿತ ಉಗ್ರರು ಉತ್ತರ ಪ್ರದೇಶಕ್ಕೆ ಬಂದಿದ್ದಾರೆ ಎಂದು ಹೇಳುವುದು ಕಷ್ಟ. ಉಗ್ರ ಸಂಘಟನೆಯ ಜೊತೆ ನಂಟು ಹೊಂದಿರುವುದಕ್ಕೆ ನಮಗೆ ಹಲವಾರು ಸಾಕ್ಷ್ಯಗಳು ಸಿಕ್ಕಿವೆ. ಆದರೆ ಅವುಗಳನ್ನು ಈಗ ಬಹಿರಂಗ ಪಡಿಸುವುದಿಲ್ಲ. ಈ ಸಂಬಂಧ ತನಿಖೆ ಆರಂಭವಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಓ.ಪಿ. ಸಿಂಗ್ ಹೇಳಿದ್ದಾರೆ.

ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಆಯಂಟಿ ಟೆರರ್ ಸ್ವಾಡ್ ಈ ಇಬ್ಬರನ್ನು ನಿನ್ನೆ ಪಶ್ಚಿಮ ಉತ್ತರ ಪ್ರದೇಶದ ದಿಯೋಬಾಂದ್ ನಲ್ಲಿ ಬಂಧಿಸಿದೆ. ಆರೋಪಿಗಳ ಬಳಿ ಹ್ಯಾಂಡ್ ಗನ್ ಹಾಗೂ ಬುಲೆಟ್ ಗಳು ಪತ್ತೆಯಾಗಿವೆ.