ಉತ್ತರಾಖಂಡ ಟ್ರಕ್ಕಿಂಗ್ ದುರಂತ: ಕುಂದಾಪುರ ಮೂಲದ ಪದ್ಮನಾಭ ಭಟ್ ನಿಧನ – vishwanews24

Featured, ಉಡುಪಿ

ಉತ್ತರಾಖಂಡದಲ್ಲಿ ಟ್ರಕ್ಕಿಂಗ್ ದುರಂತ: ಕುಂದಾಪುರ ಮೂಲದ ಪದ್ಮನಾಭ ಭಟ್ ನಿಧನ

ಉಡುಪಿ: ಉತ್ತರಾಖಂಡದ ಸಹಸ್ತ್ರ ತಾಲ್ ಶಿಖರಕ್ಕೆ ಚಾರಣಕ್ಕೆಂದು ತೆರಳಿದ್ದ ಕುಂದಾಪುರ ಮೂಲದ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದಾರೆ.

ಕುಂದಾಪುರದ ಕುಂಭಾಶಿಯ ಪದ್ಮನಾಭ ಭಟ್ ಮೃತ ದುರ್ದೈವಿ.

ಎನ್​ಡಿಎ ಸಂಸದೀಯ ನಾಯಕರಾಗಿ ನರೇಂದ್ರ ಮೋದಿ ಆಯ್ಕೆ – vishwanews24

ಶಿಖರಕ್ಕೆ ಚಾರಣಕ್ಕೆಂದು ತೆರಳಿದ್ದ 22 ಮಂದಿಯ ಪೈಕಿ ಪದ್ಮನಾಭ ಭಟ್ ಕೂಡ ಒಬ್ಬರಾಗಿದ್ದರು. ಮೂಲತಃ ಕುಂದಾಪುರದವರಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದರು. ಪದ್ಮನಾಭ ಅವರು ಮೇ 29ರಂದು ಉತ್ತರಕಾಂಡದ ಸಹಸ್ತ್ರ ತಾಲ್ ಶಿಖರಕ್ಕೆ ಚಾರಣಕ್ಕೆಂದು ತೆರಳಿದ್ದರು. ಚಾರಣ ಮುಗಿಸಿ ಶಿಖರದಿಂದ ಕೆಳಗೆ ಬರುವಾಗ ಹವಾಮಾನ ವೈಪರಿತ್ಯದಿಂದ ಈ ದುರ್ಘಟನೆ ಸಂಭವಿಸಿದ್ದು, ಕರ್ನಾಟಕದ ನಾಲ್ವರು ಸೇರಿ ಒಟ್ಟು 9 ಮಂದಿ ಸಾವನ್ನಪ್ಪಿದ್ದರು.

ನಾನು ಕೇಂದ್ರ ಸಚಿವ ಆಗಬೇಕು ಎಂಬುದು ಜನರ ನಿರೀಕ್ಷೆ , ಆರೋಗ್ಯ ಸಚಿವ ಆಗಬೇಕು ಎಂಬುದು ಜನರ ಅನಿಸಿಕೆ : ಡಾ.ಸಿ.ಎನ್ ಮಂಜುನಾಥ್ – vishwanews24

9 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 4 ಮೃತದೇಹಗಳು ದೆಹಲಿಯಿಂದ 2 ಪ್ರತ್ಯೇಕ ವಿಮಾನಗಳಲ್ಲಿ ಬೆಂಗಳೂರಿಗೆ ಬಂದಿವೆ. ಈಗಾಗಲೇ ಪದ್ಮನಾಭ್ ಅವರ ಮೃತದೇಹವನ್ನು ಹೊರತು ಪಡಿಸಿ ಉಳಿದ ಮೂವರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಇನ್ನು ಪದ್ಮನಾಭ್ ಅವರ ಮೃತದೇಹವನ್ನು ಕುಂದಾಪುರಕ್ಕೆ ತೆಗೆದುಕೊಂಡು ಬರಲು ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

Leave a Reply