ಉದ್ಯಾವರ ಸರ್ಕಾರಿ ಹೈಸ್ಕೂಲ್ ಗೆ ಭೇಟಿ ನೀಡಿದ ಭಾರತ ಸರ್ಕಾರದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ ಕುಂದರ್.
ಉದ್ಯಾವರ ಸರ್ಕಾರಿ ಹೈಸ್ಕೂಲ್ ಗೆ ಭೇಟಿ ನೀಡಿದ ಶ್ಯಾಮಲ ಕುಂದರ್.
ಉಡುಪಿ: ಭಾರತ ಸರ್ಕಾರದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಮಾಲ ಕುಂದರ್ ಇಂದು ಉಡುಪಿ ಯ ಉದ್ಯಾವರ ಸರ್ಕಾರಿ ಪ್ರೌಡ ಶಾಲೆಗೆ ಭೇಟಿ ನೀಡಿದರು.
ಅಲ್ಲಿನ ಕುಂದುಕೊರತೆಗಳನ್ನು ಪರಿಶೀಲಿಸಿ ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇವರಿಗೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಉಪಾಧ್ಯಕ್ಷರು ಸಂತೋಷ್ ಬೋಳ್ಜೆ, ಸಿಡಿಪಿಓ ವೀಣಾ, ವಿಜಯ್ ಕುಮಾರ್, ಗುಜ್ಜಾಡಿ ಪ್ರಭಾಕರ್ ನಾಯಕ್, ತಾಲೂಕು ಪಂಚಾಯತ್ ಸದಸ್ಯೆ ರಜನಿ ಅಂಚನ್, ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು
