ಉಪ ಸಭಾಪತಿ ಧರ್ಮೇಗೌಡ ಅವರ ಸಾವಿನ ಸುದ್ದಿ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ -Vishwanews24
ಉಪ ಸಭಾಪತಿ ಧರ್ಮೇಗೌಡ ಅವರ ಸಾವಿನ ಸುದ್ದಿ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ -Vishwanews24
ಬೆಂಗಳೂರು: ‘ಉಪ ಸಭಾಪತಿ ಧರ್ಮೇಗೌಡ ಅವರ ಸಾವಿನ ಸುದ್ದಿ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “’ಉಪ ಸಭಾಪತಿ ಧರ್ಮೇಗೌಡ ಅವರ ಸಾವಿಗೆ ಕಾರಣ ಹಾಗೂ ಅವರ ಪತ್ರದ ಸಾರಾಂಶ ತಿಳಿದಿಲ್ಲ. ಮಾಧ್ಯಮಗಳು ತೋರಿಸುತ್ತಿರುವ ವಿಚಾರವಷ್ಟೇ ಗೊತ್ತು. ಅವರು ಬಹಳ ಸೂಕ್ಷ್ಮವಾದ ವ್ಯಕ್ತಿ. ಅವರ ತಂದೆ ಈ ಹಿಂದೆ ಶಾಸಕರಾಗಿದ್ದರು. ಅವರ ಸೋದರರು ಎಂಎಲ್ಸಿಯಾಗಿದ್ದರು. ಆದರೆ ಅವರು ಯಾವ ವಿಚಾರಕ್ಕೆ ಈ ರೀತಿ ಧೈರ್ಯ ಕಳೆದುಕೊಂಡರು ಎಂದು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ,” ಎಂದರು.
ಇದಕ್ಕೆ ಅವರ ವೈಯಕ್ತಿಕ ವಿಚಾರ ಕಾರಣವೋ, ರಾಜಕೀಯ ಕಾರಣವೋ ಗೊತ್ತಿಲ್ಲ. ಆದರೆ ಆಗಬಾರದ್ದು ಆಗಿದೆ. ನನ್ನ ಪಕ್ಷದ ಪರವಾಗಿ, ವೈಯಕ್ತಿಕವಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಬಹಳ ದೊಡ್ಡ ಅನ್ಯಾಯವಾಗಿದೆ. ಅವರಿಗೆ ಈ ನೋವು ಎದುರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
