ಉಪ್ಪಿನಂಗಡಿ ತಲವಾರ್ ದಾಳಿ ನಡೆಸಿದ ಆರೋಪಿಗಳನ್ನು ಬಂಧಿಸದಿದ್ದರೆ ಡಿ.ಸಿ ಕಚೇರಿ ಚಲೋ ಪ್ರತಿಭಟನೆ : ವಿಶ್ವಹಿಂದೂ ಪರಿಷತ್ – Vishwanews24
ಉಪ್ಪಿನಂಗಡಿ ತಲವಾರ್ ದಾಳಿ ನಡೆಸಿದ ಆರೋಪಿಗಳನ್ನು ಬಂಧಿಸದಿದ್ದರೆ ಡಿಸಿ ಕಚೇರಿ ಚಲೋ ಪ್ರತಿಭಟನೆ : ವಿಶ್ವಹಿಂದೂ ಪರಿಷತ್ – Vishwanews24
ಪುತ್ತೂರು : ಉಪ್ಪಿನಂಗಡಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದರ ಆರೋಪಿಗಳ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ವಿಶ್ವಹಿಂದೂ ಪರಿಷತ್ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ನ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಪಿಎಫ್ಐ ಕಾರ್ಯಕರ್ತರು ಕೊಲೆಯತ್ನ ನಡೆಸಿದ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಡಿಸೆಂಬರ್ 14 ರಂದು ಉಪ್ಪಿನಂಗಡಿ ಪೋಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಾರೆ ಮತ್ತು ರಾತ್ರಿ ವೇಳೆ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಿ ಹಿರಿಯ ಪೋಲೀಸ್ ಅಧಿಕಾರಿಗಳ ಸೇರಿದಂತೆ ಪೋಲೀಸರ ಮೇಲೆ ಹಲ್ಲೆ ನಡೆಸುತ್ತಾರೆ ಎಂದರೆ ವ್ಯವಸ್ಥೆಗಳು ಎಲ್ಲಿ ಸಾಗುತ್ತಿದೆ ಎನ್ನುವ ಆತಂಕ ಸಾರ್ವಜನಿಕರಲ್ಲಿ ಮೂಡಲಾರಂಭಿಸಿದೆ ಎಂದರು.
ಪೋಲೀಸ್ ಠಾಣೆಗೆ ದಾಳಿ ಮಾಡಿದ ಪಿಎಫ್ಐ ಕಾರ್ಯಕರ್ತರ ಮೇಲೆ ದೇಶದ್ರೋಹದ ಕೇಸನ್ನು ತಕ್ಷಣವೇ ದಾಖಲಿಸಬೇಕೆಂದು ಒತ್ತಾಯಿಸಿದ ಅವರು ಉಪ್ಪಿನಂಗಡಿಯ ಮೀನು ಮಾರಾಟ ಮಾಡುತ್ತಿದ್ದವರ ಮೇಲೆ ತಲವಾರು ದಾಳಿ ನಡೆಸಿದ ಪ್ರಮುಖ ಆರೋಪಿಗಳನ್ನು ಪೋಲೀಸರು ಈವರೆಗೂ ಬಂಧಿಸಿಲ್ಲ. ಪೋಲೀಸರು ಕೂಡಲೇ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಹಿಂದೂ ಸಂಘಟನೆಗಳು ಸೇರಿ ಡಿ.ಸಿ. ಕಛೇರಿ ಚಲೋ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಮತದಾರರ ಪಟ್ಟಿಗೆ ಆಧಾರ್ ಜೋಡಣೆ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ – Vishwanews24
