ಉಳ್ಳಾಲ: ಮೆಹಂದಿ ಶಾಸ್ತ್ರದ ದಿನ ನಾಪತ್ತೆಯಾಗಿದ್ದ ಮದುಮಗ ಬಳ್ಳಾರಿಯಲ್ಲಿ ಪತ್ತೆ – Vishwanews24

Featured, ದಕ್ಷಿಣ ಕನ್ನಡ

ಉಳ್ಳಾಲ: ಮೆಹಂದಿ ಶಾಸ್ತ್ರದ ದಿನ ನಾಪತ್ತೆಯಾಗಿದ್ದ ಮದುಮಗ ಬಳ್ಳಾರಿಯಲ್ಲಿ ಪತ್ತೆ

ಉಳ್ಳಾಲ: ಮೆಹಂದಿ ಶಾಸ್ತ್ರದ ದಿನ ನಾಪತ್ತೆಯಾಗಿದ್ದ ಮದುಮಗ ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ ಐತಪ್ಪ ಶೆಟ್ಟಿ ಅವರ ಪುತ್ರ ಕಿಶನ್‌ ಶೆಟ್ಟಿ ಮೆಹಂದಿ ಶಾಸ್ತ್ರದ ದಿನ ನಾಪತ್ತೆಯಾಗಿದ್ದಾರೆ.

ಭಾನುವಾರ ಮಧ್ಯಾಹ್ನ ಕಿಶನ್‌ ಶೆಟ್ಟಿ ಅವರು ತನ್ನ ತಂಗಿಗೆ ಮೊಬೈಲ್ ಸಂದೇಶ ಕಳುಹಿಸಿ ನಾನು ಬಳ್ಳಾರಿಯಲ್ಲಿದ್ದೇನೆ. ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಮೇ 31ರಂದು ರಾತ್ರಿ ಮೆಹಂದಿ ಶಾಸ್ತ್ರಕ್ಕೆ ಹಣ್ಣು ತರಲೆಂದು ಹೋಗಿದ್ದ ಕಿಶನ್‌ ಶೆಟ್ಟಿ ನಾಪತ್ತೆಯಾಗಿದ್ದರು.

ಪಡುಬಿದ್ರಿ ನಿವಾಸಿ ಪಿ.ಎ.ಮೊಯಿದಿನ್ ಮಿಲಿಟರಿ ಅಧಿಕಾರಿಯ ಬೀಳ್ಕೊಡುಗೆ – Vishwanews24

ನಾನು ಬಳ್ಳಾರಿಯಲ್ಲಿ ಇದ್ದು, ಸ್ಕೂಟರ್ ಮೆಲ್ಕಾರ್ ಆರ್‌ಟಿಒ ಕಚೇರಿ ಮುಂದೆ ಇಟ್ಟಿದ್ದೇನೆ. ಆದರೆ ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾನೆ. ತಂಗಿ ಕರೆ ಮಾಡಲು ಯತ್ನಿಸಿದ್ದಾರೆ. ಆದರೆ ಕಿಶನ್‌ ಶೆಟ್ಟಿ ಮೊಬೈಲ್‌ ಸ್ವಿಚ್ ಆಫ್ ಮಾಡಿದ್ದಾನೆ ಎಂದು ಐತಪ್ಪ ಶೆಟ್ಟಿ ಅವರು ಕೊಣಾಜೆ ಠಾಣೆಗೆ ಹೋಗಿ ಕರೆ ಬಂದ ಬಗ್ಗೆ ಮಾಹಿತಿ ನೀಡಿದ್ದಾರೆ.

Leave a Reply