ಉಳ್ಳಾಲ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ : ಪವಾಡಸದೃಶವಾಗಿ ಪಾರಾದ ವೈದ್ಯಕೀಯ ವಿದ್ಯಾರ್ಥಿಗಳು – Vishwanews24
ಉಳ್ಳಾಲ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ : ಪವಾಡಸದೃಶವಾಗಿ ಪಾರಾದ ವೈದ್ಯಕೀಯ ವಿದ್ಯಾರ್ಥಿಗಳು
ಉಳ್ಳಾಲ: ಕಾರೊಂದು ವಿದ್ಯುತ್ ಕಂಬಕ್ಕೆ ಬಡಿದು ರಸ್ತೆ ಬದಿಯಲ್ಲಿ ಹಾಕಿದ್ದ ಕಬ್ಬಿಣ ತಡೆಬೇಲಿಗೆ ಸಿಲುಕಿ ತಲೆಕೆಳಗಾಗಿ ನಿಂತ ಘಟನೆ ತೊಕ್ಕೊಟ್ಟು ಬಬ್ಬುಕಟ್ಟೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಈ ಕಾರು ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಪವಾಡಸದೃಶವಾಗಿ ಪಾರಾಗಿದ್ದಾರೆ. ಅಪಘಾತದಿಂದ ಎಚ್.ಟಿ. ಲೈನ್ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಅಪಘಾತದಿಂದಾಗಿ ಈ ಪರಿಸರದ ಜನರಿಗೆ ಭಾನುವಾರ ಮಧ್ಯಾಹ್ನದವರೆಗೆ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು.
ಉಡುಪಿ: ಕೆವೈಸಿ ಅಪ್‌ಡೇಟ್ ಮಾಡುವುದಾಗಿ ನಂಬಿಸಿ 1.90 ಲಕ್ಷ ರೂ. ವಂಚನೆ – Vishwanews24
ಕಾರಿನಲ್ಲಿ ದೇರಳಕಟ್ಟೆಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ತೊಕ್ಕೊಟ್ಟು ಕಡೆಯಿಂದ ದೇರಳಕಟ್ಟೆಗೆ ಸಾಗುತ್ತಿದ್ದಾಗ ಟಿಪ್ಪರ್ ಒಂದನ್ನು ಓವರ್‌ಟೇಕ್ ಮಾಡುವ ಸಂದರ್ಭಟಿಪ್ಪರ್ ಚಾಲಕ ಲಾರಿಯನ್ನು ಬಲಕ್ಕೆ ತಿರುಗಿಸಿದ್ದಾನೆ. ಈ ವೇಳೆ ಅಪಘಾತದಿಂದ ತಪ್ಪಿಸಲು ಕಾರಿನ ಚಾಲಕ ಎಡಕ್ಕೆ ತಿರುಗಿಸಿದ್ದಾನೆ.
ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಬಡಿದು ರಸ್ತೆ ಬದಿಯಲ್ಲಿ ಹಾಕಿದ್ದ ಕಬ್ಬಿಣ ತಡೆಬೇಲಿಗೆ ಸಿಲುಕಿ ತಲೆಕೆಳಗಾಗಿ ನಿಂತಿದೆ. ಇನ್ನು ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ : ನೇತ್ರಾವತಿ ನದಿ ನೀರಿನಲ್ಲಿ ಆಟವಾಡಲು ಇಳಿದ ಇಬ್ಬರು ಬಾಲಕಿಯರು ಮೃತ್ಯು – Vishwanews24
