ಎರಡು ವರ್ಷಗಳಿಂದ ನಿಮಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ ಈಗ ನೀವು ಟೋಪಿ ಹಾಕಬೇಕು : ಡಿ.ಕೆ. ಶಿ – Vishwanews24

Featured, ರಾಜ್ಯ ನ್ಯೂಸ್

ಎರಡು ವರ್ಷಗಳಿಂದ ನಿಮಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ ಈಗ ನೀವು ಟೋಪಿ ಹಾಕಬೇಕು : ಡಿ.ಕೆ. ಶಿ – Vishwanews24

ಹಾನಗಲ್‌:  ಎರಡು ವರ್ಷಗಳಿಂದ ನಿಮಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ ಈಗ ನೀವು ಟೋಪಿ ಹಾಕಬೇಕು. ಕೇಂದ್ರ, ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ತಂದರೆ ಇಂದ್ರ-ಚಂದ್ರನನ್ನು ತೋರಿಸುವುದಾಗಿ ಹೇಳಿ ಜನರಿಗೆ ಟೋಪಿ ಹಾಕಿದ ಬಿಜೆಪಿಗೆ ಈಗ ಜನ ಟೋಪಿ ಹಾಕಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದ್ದಾರೆ.

ಹಾನಗಲ್‌ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ಕೈಗೊಂಡ ಅವರು, ಬಿಜೆಪಿಯವರು ಯಾವ ಕಾರಣಕ್ಕೆ ತಮಗೆ ಮತ ನೀಡಿ ಎಂದು ಕೇಳುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಯಾಕೆ ಮತಹಾಕಬೇಕು ಎಂದು ಅವರೇ ಹೇಳಬೇಕು. ಅದನ್ನು ಬಿಟ್ಟು ಸಿದ್ದರಾಮಯ್ಯ ರಾಹುಲ್‌ ಗಾಂಧಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

2013ರಲ್ಲಿ 50 ಇದ್ದ ಪೆಟ್ರೋಲ್‌ ಈಗ 110 ಆಗಿದೆ. ಇದು ಅಚ್ಛೇ ದಿನನಾ? 2014ರಲ್ಲಿ ಅಡುಗೆ ಅನಿಲದ ಸಿಲಿಂಡರ್‌ 410 ಇತ್ತು. ಈಗ ಅದು 980 ಆಗಿದೆ. ಇದು ಅಚ್ಛೇ ದಿನಾನ? ಅಡುಗೆ ಎಣ್ಣೆ 99 ಇತ್ತು. ಈಗ 200 ಆಗಿದೆ. ಮೋದಿ ಅವರು ಹೇಳಿದಂತೆ ಪಕೋಡಾ ಮಾರುವುದಾದರೂ ಹೇಗೆ? ಇದು ಈ ಚುನಾವಣೆಯ ಪ್ರಶ್ನೆ ಆಗಬೇಕು ಎಂದರು. ಕೋವಿಡ್ ರೋಗ ತಂದು ಹಬ್ಬಿಸಿದರು. ಗಂಟೆ, ಜಾಗಟೆ ಬಾರಿಸಿ, ಚಪ್ಪಾಳೆ ಹೊಡೆದು ದೀಪ ಹಚ್ಚಿ ಎಂದರು. ಅದನ್ನು ನಾವೆಲ್ಲ ಮಾಡಿದ್ದೇವೆ. ಕೊರೋನಾ ಹೋಯಿತೇ? ಸಂಕಷ್ಟಕ್ಕೆ ಸರ್ಕಾರ ಪರಿಹಾರ ನೀಡಿತೆ? ಎಂದರು.

ಮುಸ್ಲಿಂ ಧರ್ಮದಲ್ಲಿ ಮದುವೆ ಎನ್ನುವುದು ಕೇವಲ ಒಪ್ಪಂದ, ಅದು ಸಂಸ್ಕಾರವಲ್ಲ : ಕರ್ನಾಟಕ ಹೈಕೋರ್ಟ್ – Vishwanews24

ಸ್ಥಳೀಯವಾಗಿ ಹೂ ಬೆಳೆದು ಅದನ್ನು ಗೋವಾಗೆ ಮಾರುತ್ತಿದ್ದರು. ಆದರೆ ಇಂದು ನೀವು ಬೆಳೆದ ಹೂವು ಬೇಡ ಎಂದು ತಿರಸ್ಕರಿಸುತ್ತಿದ್ದಾರೆ. ಈ ವಿಚಾರವಾಗಿ ನನಗೆ ಮನವಿ ಪತ್ರವನ್ನು ಗ್ರಾಮಸ್ಥರೇ ನೀಡಿದ್ದಾರೆ. ಮುಖ್ಯಮಂತ್ರಿಗಳೇ ಇದು ನಿಮ್ಮ ತವರು ಜಿಲ್ಲೆ. ಈ ರಾಜ್ಯದ ರೈತನರಕ್ಷಣೆ ಮಾಡಬೇಕಾದ ಜವಾಬ್ದಾರಿ ನಿಮ್ಮದು. ಈ ರೈತರ ಕಷ್ಟನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಮನೋಹರ ತಹಶೀಲ್ದಾರ, ಅನಿರೀಕ್ಷಿತವಾಗಿ ಚುನಾವಣೆ ಬಂದಿದೆ. ಸಮರ್ಥವಾಗಿ ಚುನಾವಣೆ ಎದುರಿಸಬೇಕಾಗಿದೆ. ಈ ಭಾಗದಲ್ಲಿ ಮೊದಲು ನೀರಾವರಿ ಸೌಲಭ್ಯಕ್ಕಾಗಿ ಬಾಳಂಬಿಡ ಯೋಜನೆ ಆರಂಭಿಸಿದ್ದು ನಾವು. ಶ್ರೀನಿವಾಸ ಮಾನೆ ಅವರಿಗೆ ನನಗಿಂತ ಹೆಚ್ಚು ಬೆಂಬಲ ನೀಡಿ ಗೆಲ್ಲಿಸಿ ಎಂದರು. ಪ್ರಚಾರಕ್ಕೂ ಮುನ್ನ ಕೊಪ್ಪರಸಿಕೊಪ್ಪದಲ್ಲಿ ಪ್ರಮುಖರು ರೋಡ್‌ ಶೋ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಇತರರು ಇದ್ದರು.

ಕಾರ್ಕಳ: ಇಬ್ಬರು ನಕ್ಸಲ್‌ವಾದಿಗಳ ಬಂಧನಕ್ಕೆ ವಾರಂಟ್ ಜಾರಿ ; ಇಬ್ಬರ ಸುಳಿವು ನೀಡಿದವರಿಗೆ ರೂ.10 ಲಕ್ಷ ಬಹುಮಾನ ಘೋಷಣೆ – Vishwanews24