ಎಲ್ಪಿಜಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಳ – vishwanews24
ಎಲ್ಪಿಜಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಳ
ನವದೆಹಲಿ: ವಿತರಣಾ ಕಂಪನಿಗಳು ಎಲ್ಪಿಜಿ ಪ್ರತಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಿಸಿರುವುದಾಗಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ತಿಳಿಸಿದ್ದಾರೆ.
ಉಜ್ವಲ (ಪಿಎಂಯುವೈ) ಮತ್ತು ಉಜ್ವಲೇತರ ಗ್ರಾಹಕರಿಗೂ ಬೆಲೆ ಏರಿಕೆ ಅನ್ವಯವಾಗಲಿದೆ. ಆದ್ದರಿಂದ ಇನ್ಮುಂದೆ ಉಜ್ವಲ ಯೋಜನೆಯ 503 ರೂ. ಪಾವತಿಸುತ್ತಿದ್ದ 14.2 ಕೆಜಿ ಸಿಲಿಂಡರ್ಗೆ 553 ರೂ. ಹಾಗೂ ಇತರೇ ಗ್ರಾಹಕರು 803 ರೂ. ಪಾವತಿಸುತ್ತಿದ್ದ 14.2 ಕೆಜಿ ಸಿಲಿಂಡರ್ಗೆ 853 ರೂ. ಪಾವತಿಸಬೇಕಾಗುತ್ತದೆ.
