ಎಲ್ಲಾ ತಂತ್ರಗಳೊಂದಿಗೆ ಭಾರತೀಯ ಸೇನೆ ಶಸ್ತ್ರಸಜ್ಜಿತವಾಗಲಿದ್ದು, ಭವಿಷ್ಠದ ಎಲ್ಲ ರೀತಿಯ ಯುದ್ಧಗಳಿಗೆ ಸಿದ್ಧವಾಗಲಿದೆ : ಬಿಪಿನ್ ರಾವತ್ -Vishwanews24
ನವದೆಹಲಿ: ಎಲ್ಲಾ ತಂತ್ರಗಳೊಂದಿಗೆ ಭಾರತೀಯ ಸೇನೆ ಶಸ್ತ್ರಸಜ್ಜಿತವಾಗಲಿದ್ದು, ಭವಿಷ್ಠದ ಎಲ್ಲ ರೀತಿಯ ಯುದ್ಧಗಳಿಗೆ ಸಿದ್ಧವಾಗಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ದೆಹಲಿ ಮಾನೆಕ್ಷಾ ಕೇಂದ್ರದಲ್ಲಿ ನಡೆದ ಸೇನಾ ತಂತ್ರಜ್ಞಾನ ಸೆಮಿನಾರ್ ನ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಸೇನೆಯ ತಾಂತ್ರಿಕ ಸಾಮರ್ಥ್ಯದ ಕುರಿತು ಮಾತನಾಡಿದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಆಧುನಿಕ ತಂತ್ರಗಳು ನಮ್ಮ ಸೈನ್ಯಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂದರು.


ಭಾರತೀಯ ಸೇನೆಯು ಅವಶ್ಯಕತೆಗೆ ಅನುಗುಣವಾಗಿ ಆವಿಷ್ಕಾರ ಮಾಡುವ ಕೆಲಸ ಮಾಡುವುದಿಲ್ಲ, ಆದರೆ ಉಪಕ್ರಮವನ್ನು ತೆಗೆದುಕೊಳ್ಳಲು ಹೊಸ ತಂತ್ರಜ್ಞಾನಗಳನ್ನು ಸಿದ್ಧಪಡಿಸುತ್ತಿದೆ ಎಂದು ಅವರು ಹೇಳಿದರು.
ಅಂತೆಯೇ ಮಿಲಿಟರಿ ಉಪಕರಣಗಳಲ್ಲಿ ತಂತ್ರಜ್ಞಾನ ಯಾವಾಗಲೂ ಮುಂದಿರಬೇಕು ಎಂಬುದು ಭಾರತೀಯ ಸೇನೆಯ ತತ್ವ. ಎಂದಿರುವ ಅವರು ಸೇನೆಯು ಕೃತಕ ಬುದ್ಧಿಮತ್ತೆ, ಕ್ವಾಂಟಮ್ ತಂತ್ರಜ್ಞಾನ ಮತ್ತು ಎಲ್ಲಾ ಅಗತ್ಯಗಳನ್ನು ಹೊಂದಬೇಕಾದ ಅವಶ್ಯಕತೆಯಿದೆ. ಇದರೊಂದಿಗೆ ಭಾರತೀಯ ಸೇನೆಯು ಅತ್ಯಂತ ವೇಗವಾಗಿ ಚಲಿಸುತ್ತಿದೆ ಎಂದು ರಾವತ್ ಹೇಳಿದರು.
