ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನ ಪ್ರಯಾಣದ ವೇಳೆ ಮಾಸ್ಕ್‌  ಕಡ್ಡಾಯ – Vishwnaews24

Featured, ರಾಷ್ಟ್ರ ನ್ಯೂಸ್

ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನ ಪ್ರಯಾಣದ ವೇಳೆ ಮಾಸ್ಕ್‌  ಕಡ್ಡಾಯ

ಹೊಸದಿಲ್ಲಿ: ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನ ಪ್ರಯಾಣದ ವೇಳೆ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ.

ಕೊರೊನಾ ಪ್ರಕರಣ ಇಳಿಮುಖವಾಗುತ್ತಿದೆಯೆಂದು ಮತ್ತು ಸರ್ಕಾರ ನಿಯಮಾವಳಿಗಳನ್ನು ಸಡಿಲಗೊಳಿಸಿರುವ ಕಾರಣಕ್ಕಾಗಿ ಪ್ರಸ್ತುತ ಮಾಸ್ಕ್ ಧರಿಸದೆಯೇ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚೆಚ್ಚು ಕಂಡು ಬರುತ್ತಿವೆ. ಈ ನಿಟ್ಟಿನಲ್ಲಿ ಸಂಭಾವ್ಯ ಅಪಾಯಗಳನ್ನು ತಪ್ಪಿಸುವ ಕಾರಣಕ್ಕಾಗಿ ಡಿಜಿಸಿಎಯು ವಿಮಾನಯಾನಿಗಳಿಗಾಗಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ. ದೇಶದ ಎಲ್ಲ ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳಲ್ಲಿ ಮಾಸ್ಕ್ ಧರಿಸುವುದು ಇನ್ನು ಮುಂದೆ ಕಡ್ಡಾಯ ಎಂದು ಬುಧವಾರ ಸೂಚನೆ ನೀಡಲಾಗಿದೆ.

ಮಾಸ್ಕ್ ಧರಿಸದ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸುವುದರೊಂದಿಗೆ ಮಾಸ್ಕ್ ಧರಿಸದೆ ಹಠದ ಧೋರಣೆ ತೋರಿಸದಲ್ಲಿ ಅದನ್ನು ಅಶಿಸ್ತು ಎಂದು ಪರಿಗಣಿಸಿ ಅವರ ವಿರುದ್ದ ಕ್ರಮ ಕೈಗೊಳ್ಳಬಹುದು ಎಂದು ಸೂಚನೆಯಲ್ಲಿ ತಿಳಿಸಿಲಾಗಿದೆ. ವಿಮಾನಯಾನಿಗಳು ಮತ್ತು ಸಿಬಂದಿಗೆ ಕಠಿಣ ನಿಯಮ ಜಾರಿಗೊಳಿಸಬೇಕೆಂಬ ದಿಲ್ಲಿ ಹೈಕೋರ್ಟ್‌ ಜೂ. 3ರಂದು ಹೊರಡಿಸಿದ ಆದೇಶದ ಬೆನ್ನಲ್ಲೇ ಡಿಜಿಸಿಎ ಈ ಸೂಚನೆಗಳನ್ನು ಜಾರಿಗೊಳಿಸಿದೆ. ಯಾನಿಗಳಿಗೆ ಈ ಬಗ್ಗೆ ಮಾಹಿತಿ ನೀಡುವುದಕ್ಕೆಂದು ಪ್ರಕಟಣೆ ನೀಡಲು ಎಲ್ಲಾ ಏರ್‌ಲೈನ್‌ಗಳಿಗೆ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರಿಗೆ ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ಪಡೆಗಳ ಸಹಕಾರದೊಂದಿಗೆ ದಂಡ ಮತ್ತು ಕ್ರಮ ಕೈಗೊಳ್ಳಬಹುದು ಎಂದು ನಿರ್ದೇಶನಾಲಯ ತಿಳಿಸಿದೆ.

ಆಗಸ್ಟ್ 16ರೊಳಗೆ  ಫಸಲ್ ಭಿಮಾ ಯೋಜನೆಯಡಿ ಭತ್ತ ನೋಂದಾಯಿತ ಬೆಳೆಗೆ ತಮ್ಮ ಹೆಸರು ನೋಂದಾಯಿಸಲು ಜಿಲ್ಲೆಯ ರೈತರಿಗೆ ಕರೆ – Vishwanews24

Leave a Reply