ಎಸಿ ಸ್ಫೋಟ : ಇಬ್ಬರು ಮಕ್ಕಳ ಸಹಿತ ದಂಪತಿ ಸಜೀವ ದಹನ – Vishwanews24

Featured, ರಾಜ್ಯ ನ್ಯೂಸ್

ಎಸಿ ಸ್ಫೋಟ : ಇಬ್ಬರು ಮಕ್ಕಳ ಸಹಿತ ದಂಪತಿ ಸಜೀವ ದಹನ – Vishwanews24

ವಿಜಯನಗರ: ಎಸಿ ಸ್ಫೋಟಗೊಂಡ ಪರಿಣಾಮ ಇಬ್ಬರು ಮಕ್ಕಳ ಸಹಿತ ದಂಪತಿ ಸಜೀವ ದಹನವಾಗಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಸಂಭವಿಸಿದೆ.

ಮೃತರನ್ನು ವೆಂಕಟ್ ಪ್ರಶಾಂತ್ (42), ಚಂದ್ರಕಲಾ (28), ಅದ್ವಿಕ್ (16), ಪ್ರೇರಣಾ (8) ಎಂದು ಗುರುತಿಸಲಾಗಿದೆ. ಇದೇ ಮನೆಯಲ್ಲಿ ವಾಸವಿದ್ದ ರಾಘವೇಂದ್ರ ಶೆಟ್ಟಿ ಹಾಗೂ ಅವರ ಪತ್ನಿ ರಾಜಶ್ರೀ ಅವರು ಅಪಾಯದಿಂದ ಪಾರಾಗಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಪೋಟಗೊಂಡಿರಬಹುದು ಎಂದು ಶಂಕಿಸಲಾಗಿದ್ದು, ಅಗ್ನಿ ಅವಘಡ ಸಂಭವಿಸಿದಾಗ ದಂಪತಿ ಮತ್ತು ಮಕ್ಕಳು ಹೊರಬರಲಾಗದೆ ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮರಿಯಮ್ಮನಹಳ್ಳಿಯ ರಾಘವೇಂದ್ರ ಶೆಟ್ಟಿ ಎಂಬುವವರ ಮನೆಯಲ್ಲಿ ರಾತ್ರಿ ಹೊತ್ತು ಮಲಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಗ್ರಾಹಕ ಮೆಚ್ಚಿದ ಕಾಪುವಿನ ನಂಬರ್ ವನ್ ಆಭರಣ ಮಳಿಗೆ” ಜಯಲಕ್ಷ್ಮೀ ಜ್ಯುವೆಲ್ಲರ್ಸ್”: vishwanews24

Leave a Reply