ಎಸ್ ಡಿಪಿಐ , ಪಿಎಫ್ ಐ ಜೊತೆ ಸನಾತನ ಧರ್ಮ , RSS , VHP, ಬಜರಂಗದಳ ನಿಷೇಧಿಸಿ : ಎಂ.ಬಿ.ಪಾಟೀಲ್ – Vishwanews24
ಕೋಮು ಭಾವನೆ ಕೆರಳಿಸುವ ಸಂಘಟನೆಗಳ ನಿಷೇಧಕ್ಕೆ ಕಾಂಗ್ರೆಸ್ ಬೆಂಬಲ..
ಎಸ್ ಡಿಪಿಐ ,ಪಿಎಫ್ ಐ ಜೊತೆಗೆ ಸನಾತನ ಸಂಘಟನೆಗಳನ್ನು ನಿಷೇಧಿಸಬೇಕು..
ಆರ್ ಎಸ್ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ..
ಬೆಂಗಳೂರು : ಕೋಮು ಭಾವನೆ ಕೆರಳಿಸುವ ಹಿಂದೂ ಸಂಘಟನೆಗಳ ನಿಷೇಧಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಆಗ್ರಹಿಸಿದರು.
ಸನಾತನ ಧರ್ಮ ಸಂಘಟನೆ, ಆರ್ ಎಸ್ಎಸ್ ವಿಶ್ವ ಹಿಂದೂ ಪರಿಷತ್, ಬಜರಂಗದಳ ನಿಷೇಧಿಸಿ ಎಂದು ಅವರು ಆಗ್ರಹಿಸಿದ್ದಾರೆ.ಸರಕಾರ ಸನಾತನ ಧರ್ಮ ಸಂಘಟನೆಯನ್ನು ನಿಷೇಧಿಸಬೇಕು.
ಎಸ್ ಡಿಪಿಐ ,ಪಿಎಫ್ ಐ ಜೊತೆಗೆ ಸನಾತನ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಆರ್ ಎಸ್ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಆರೆಸ್ಸೆಸ್ಸಿಗರು ಬ್ರಿಟಿಷರ ಏಜೆಂಟ್ ಆಗಿದ್ದರು ಎಂದು ಆರೋಪಿಸಿದರು.ಜನರಲ್ಲಿ ಕೋಮು ಭಾವನೆ ಬಿತ್ತಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಆರ್ ಎಸ್ಎಸ್ ಹಿನ್ನೆಲೆ ಜಗತ್ತಿಗೆ ಗೊತ್ತಿದೆ ಎಂದು ಕಿಡಿಕಾರಿದರು.
ಕಾನೂನು ಕೈಯಲ್ಲಿ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ.ತಪ್ಪಿತಸ್ಥರು ಯಾರೇ ಇರಲಿ ನಿಧಾ೯ಕ್ಷಣ್ಯ ಕ್ರಮ ಆಗಬೇಕು ಎಂದ ಆವರು, ನಿರಪರಾಧಿಗಳಿಗೆ ಮಾನಸಿಕ ಕಿರುಕಳ ನೀಡಬೇಡಿ,ಎಸ್.ಡಿ.ಪಿ.ಐ ಸಂಘಟನೆ ಕೂಡಲೇ ಬ್ಯಾನ್ ಮಾಡಿ. ಪಿಎಫ್ಐ ಬ್ಯಾನ್ ಮಾಡಿ,ಇದರೊಟ್ಟಿಗೆ RSS, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶ್ರೀರಾಮಸೇನೆ ಸಹಿತ ಬ್ಯಾನ್ ಮಾಡಿ ಎಂದು ಆಗ್ರಹಿಸಿದರು.
ಯಾರೂ ಕೋಮುಭಾವನೆ ಕೆರಳಿಸುತ್ತಾರೋ ಅವರನ್ನ ಬ್ಯಾನ್ ಮಾಡಿ, ನಮ್ಮದೂ ಏನು ಅಭ್ಯಂತರವಿಲ್ಲ.ಕಾಂಗ್ರೆಸ್ ಪಕ್ಷವು ಬ್ಯಾನ್ ಮಾಡಲು ಸಪೋಟ೯ ಮಾಡುತ್ತೇ,ಆದರೆ ಎರಡನ್ನೂ ಬ್ಯಾನ್ ಮಾಡಿ ಎಂದರು.
ಕೊರೊನಾ : ರಾಜ್ಯದ ಜನರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು : ಸಚಿವ ಸುಧಾಕರ್ – Vishwanews24
