ಏಪ್ರಿಲ್ 27ಕ್ಕೆ ಪ್ರವೀಣ್ ನೆಟ್ಟಾರ್‌ ಅವರ ಕನಸಿನ ಮನೆ ಗೃಹ ಪ್ರವೇಶ – Vishwanews24

Featured, ದಕ್ಷಿಣ ಕನ್ನಡ

ಏಪ್ರಿಲ್ 27ಕ್ಕೆ ಪ್ರವೀಣ್ ನೆಟ್ಟಾರ್‌ ಅವರ ಕನಸಿನ ಮನೆ ಗೃಹ ಪ್ರವೇಶ

ಸುಳ್ಯ: ಸಮಾಜ ಘಾತುಕ ಶಕ್ತಿಗಳ ಕುತಂತ್ರಕ್ಕೆ ಬಲಿಯಾದ ದಿವಂಗತ ಪ್ರವೀಣ್ ನೆಟ್ಟಾರ್‌ ಅವರ ಕನಸಿನ ಮನೆ ಪ್ರವೀಣ್ ನಿಲಯದ ಗೃಹ ಪ್ರವೇಶಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.

ಏಪ್ರಿಲ್ 27ಕ್ಕೆ ಬೆಳ್ಳಾರೆಯ ನೆಟ್ಟಾರಿನಲ್ಲಿ ಗೃಹ ಪ್ರವೇಶ ಕಾರ್ಯಕ್ರಮ ನಡೆಯಲಿದೆ . ಅಂದು ಗಣಪತಿ ಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಗೃಹ ಪ್ರವೇಶ ನೆರವೇರಲಿದೆ.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಎನ್‌ಐಎನಿಂದ ಮತ್ತೆ ಮೂವರು ಆರೋಪಿಗಳ ಬಂಧನ |  Prajavani

ಇದೇ ವೇಳೆ ಬೆಳಗ್ಗೆ 11 ಗಂಟೆಗೆ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ಹಾಗೂ ಅದೇ ದಿನ ರಾತ್ರಿ 7 ರಿಂದ ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವವೂ ನಡೆಯಲಿದೆ ಎಂದು ತಿಳಿಸಲಾಗಿದೆ.

ಏ.8ಕ್ಕೆ ಮೈಸೂರಿಗೆ ಪ್ರಧಾನಿ ಮೋದಿ  – Vishwanews24

Leave a Reply