ಐಸಿಯುನಲ್ಲಿ ರೋಮ್ ನಲ್ಲಿರುವ ಮಗನೊಂದಿಗೆ ವಿಡಿಯೋ ಕರೆಯಲ್ಲಿ 10 ನಿಮಿಷಗಳ ಕಾಲ ನೋಡುತ್ತಾ ಕಣ್ಣೀರು ಸುರಿಸಿ ಕೊನೆಯುಸಿರೆಳೆದ ತಾಯಿ – Vishwanews24

Featured, ದಕ್ಷಿಣ ಕನ್ನಡ

ಐಸಿಯುನಲ್ಲಿದ್ದ ತಾಯಿಗೆ ಸಾಯುವ ಮುನ್ನ ಮಗನನ್ನು ನೋಡಬೇಕೆಂಬ ಹಂಬಲ..

ತಾಯಿಯ ಕೊನೆಯಾಸೆ ನೆರವೇರಿಸಿದ ವೈದ್ಯರು

ರೋಮ್ ನಲ್ಲಿರುವ ಮಗನೊಂದಿಗೆ 10 ನಿಮಿಷಗಳ ಕಾಲ ವಿಡಿಯೋ ಕರೆಯಲ್ಲಿ ನೋಡುತ್ತಾ ಕಣ್ಣೀರು ಸುರಿಸಿದ ತಾಯಿ

ತನ್ನ ಮಗನನ್ನು ನೋಡಿದ ಬಳಿಕ ಕೊನೆಯುಸಿರೆಳೆದ ತಾಯಿ

ಮನಮಿಡಿಯುವ ಸ್ಟೋರಿ ಹಂಚಿಕೊಂಡ ಮಂಗಳೂರಿನ ಪ್ರಖ್ಯಾತ ವೈದ್ಯ ಡಾ.ಪಿ. ಕಾಮತ್

ಮಂಗಳೂರು: ಶಿಕ್ಷಣ ಪಡೆದ ಯುವಕರು ಉದ್ಯೋಗಕ್ಕಾಗಿ ವಿದೇಶಕ್ಕೆ ವಲಸೆ ಹೋಗುತ್ತಾರೆ. ತಮ್ಮ ಹೆತ್ತವರನ್ನು ಊರಿನಲ್ಲೇ ಬಿಟ್ಟು ಪರದೇಶಕ್ಕೆ ತೆರಳುವುದು ಅವರಿಗೆ ಅನಿವಾರ್ಯವೂ ಹೌದು. ಕೆಲವೊಮ್ಮೆ ತಮ್ಮ ಹೆತ್ತವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರೂ ಕೂಡ ಅವರಿಗೆ ಸ್ವದೇಶಕ್ಕೆ ಮರಳಲಾಗದಂತಹ ಪರಿಸ್ಥಿತಿಯಿರುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳ ಯುಗವಾಗಿರೋದ್ರಿಂದ ವಾಟ್ಸಾಪ್ ಮುಂತಾದವುಗಳಲ್ಲಿ ವಿಡಿಯೋ ಕಾಲ್ ಮುಖಾಂತರವೇ ಮಾತನಾಡಬಹುದಾಗಿದೆ. ಮಂಗಳೂರಿನ ಪ್ರಖ್ಯಾತ ವೈದ್ಯರಾದ ಡಾ. ಪದ್ಮನಾಭ ಕಾಮತ್ ಅವರು ಮನಮಿಡಿಯುವ ಟ್ವೀಟ್ ಮಾಡಿದ್ದಾರೆ.

ಇಲ್ಲಿ ತಾಯಿ ಆಸ್ಪತ್ರೆಯ ಐಸಿಯುನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರೆ, ಅತ್ತ ಅವರ ಪುತ್ರ ರೋಮ್ ನಲ್ಲಿದ್ದಾರೆ. ತಾವು ಆಸ್ಪತ್ರೆಯಲ್ಲಿ ಐಸಿಯು ಬೆಡ್ ನಲ್ಲಿ ಮಲಗಿದ್ರೂ ಆ ತಾಯಿಗೆ ತನ್ನ ಮಗನದ್ದೇ ಚಿಂತೆ. ತಾನು ಸಾಯುವ ಮುನ್ನ ಮಗನನ್ನು ನೋಡಬೇಕೆಂಬ ಹಂಬಲ ವ್ಯಕ್ತಪಡಿಸುತ್ತಾರೆ. ಕೈ ಸನ್ನೆಗಳ ಮೂಲಕ ತನ್ನ ಪುತ್ರನಲ್ಲಿ ಮಾತನಾಡಿಸುವಂತೆ ಮನವಿ ಮಾಡುತ್ತಾರೆ.

ರಿಷಬ್ ಶೆಟ್ಟಿ ಬಹಳಷ್ಟು ಬುದ್ದಿವಂತಿಕೆಯಿಂದ ಸಿನಿಮಾ ಮಾಡಿದ್ದಾನೆ.. ವಿಚಾರವಾದಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್‌ ಹೇಳಿಕೆ..

ರೋಗಿಯ ಕೈ ಸನ್ನೆಗಳಿಂದ ಅರಿತ ವೈದ್ಯರು ಕೂಡಲೇ ರೋಮ್ ನಲ್ಲಿರುವ ಆಕೆಯ ಪುತ್ರನಿಗೆ ವಿಡಿಯೋ ಕಾಲ್ ಮಾಡುತ್ತಾರೆ. ಸಾಮಾನ್ಯವಾಗಿ ಐಸಿಯುನಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ. ಆದರೆ, ತಾಯಿಯ ಹಂಬಲಕ್ಕೆ ಕರಗಿದ ವೈದ್ಯರು ಐಸಿಯುನಿಂದ ವಿಡಿಯೋ ಕರೆ ಮಾಡುವುದನ್ನು ಅನುಮತಿಸಿದ್ದಾರೆ. ಆಕೆ ತನ್ನ ಪುತ್ರನನ್ನು 10 ನಿಮಿಷಗಳ ಕಾಲ ವಿಡಿಯೋ ಕರೆಯಲ್ಲಿ ನೋಡುತ್ತಾ ಅತ್ತಿದ್ದಾಳೆ. ತನ್ನ ಮಗನನ್ನು ನೋಡಿದ ಬಳಿಕ ಆಕೆ ಕೊನೆಯುಸಿರೆಳೆದಿದ್ದಾಳೆ.

ಈ ಕರುಣಾಜನಕ ಕಥೆಯನ್ನು ಡಾ. ಪದ್ಮನಾಭ ಕಾಮತ್ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. “ವೆಂಟಿಲೇಟರ್‌ನಲ್ಲಿರುವ ವಯಸ್ಸಾದ ಮಹಿಳೆ ರೋಮ್‌ನಲ್ಲಿರುವ ತನ್ನ ಕಿರಿಯ ಮಗನಿಗೆ ಮಾತನಾಡಲು ಸನ್ನೆಗಳನ್ನು ಮಾಡುತ್ತಾರೆ. ಐಸಿಯುನಿಂದ ವಿಡಿಯೋ ಕರೆಯನ್ನು ಅನುಮತಿಸಲಾಯ್ತು. ನಾನು ಸುಮಾರು ಒಂದು ದಶಕದ ಕಾಲ ಆಕೆಯ ಹೃದ್ರೋಗ ತಜ್ಞರಾಗಿದ್ದೇನೆ. ಆಕೆ ತನ್ನ ಮಗನನ್ನು ಹತ್ತು ನಿಮಿಷಗಳ ಕಾಲ ಕಣ್ಣೀರು ಸುರಿಸುತ್ತಾ ನೋಡಿದರು. ಬಳಿಕ ಕೊನೆಯುಸಿರೆಳೆದಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ. ಇದು ವಿಧಿಯಾಟವಾಗಿದ್ದು, ಯಾರನ್ನೂ ಇಲ್ಲಿ ದೂಷಿಸುವಂತಿಲ್ಲ. ಕುಟುಂಬಕ್ಕೆ ಸಹಾಯ ಮಾಡಲು ತಾನು ಮಾಡಬಹುದಾದ ಕನಿಷ್ಠ ಸಹಾಯ ಇದಾಗಿದೆ ಅಂತಾ ಡಾ. ಪಿ. ಕಾಮತ್ ಹೇಳಿದರು.

ಟ್ವೀಟ್ ಅನ್ನು ಓದುವಾಗ, ತಾನು ನಿಜವಾಗಿಯೂ ತಾಯಿ ಮತ್ತು ಮಗನ ನಡುವಿನ ನೋವಿನ ಕ್ಷಣವನ್ನು ಕಲ್ಪಿಸಿಕೊಳ್ಳುತ್ತಿದ್ದೆ. ತುಂಬಾ ದುಃಖವಾಗುತ್ತಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹಾಗೂ ವೈದ್ಯರು ಮಾಡಿದ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಚಂದ್ರಗ್ರಹಣ ಹಿನ್ನೆಲೆ.. ನ.8ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆ ರದ್ದು – Vishwanews24

Leave a Reply