ಒಂದು ವಾರದಲ್ಲಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಎಕ್ಸ್​ಪೈರಿ ಔಷಧಗಳು ವಶಕ್ಕೆ: ಸಚಿವ ಯುಟಿ ಖಾದರ್ – vishwanews24

Featured, ರಾಜ್ಯ ನ್ಯೂಸ್

ಒಂದು ವಾರದಲ್ಲಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಎಕ್ಸ್​ಪೈರಿ ಔಷಧಗಳು ವಶಕ್ಕೆ..

ಕರ್ನಾಟಕ ಸರ್ಕಾರವು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಬದ್ಧ : ಸಚಿವ ಯುಟಿ ಖಾದರ್ 

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ವಾರ ಆಹಾರ ಇಲಾಖೆ ನಡೆಸಿದ ದಾಳಿಗಳಲ್ಲಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಔಷಧಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆರೋಗ್ಯ ಇಲಾಖೆ ಸಚಿವ ಯುಟಿ ಖಾದರ್ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇ-ಕಾಮರ್ಸ್ ಮೂಲಕ ಔಷಧ ಮಾರಾಟದ ಮೇಲೆ ನಡೆದ ದಾಳಿಯ ವೇಳೆ, ಡಾರ್ಕ್ ಸ್ಟೋರ್‌ಗಳಲ್ಲಿ 45 ಲಕ್ಷ ರೂ. ಮೌಲ್ಯದ ಎಕ್ಸ್​ಪೈರಿ ಔಷಧ ಸಂಗ್ರಹ ಪತ್ತೆಯಾಗಿದ್ದು, ಹೊಸಕೋಟೆಯಲ್ಲಿ ಈ ಔಷಧಗಳಿಗೆ ಮರು ಲೇಬಲಿಂಗ್ ಮಾಡಲಾಗುತ್ತಿತ್ತು. ಅಧಿಕಾರಿಗಳು ಈ ಔಷಧಗಳನ್ನು ಸೀಜ್ ಮಾಡಿದ್ದಾರೆ ಎಂದರು.

108 ಆ್ಯಂಬುಲೆನ್ಸ್​ ವಾಹನ ಸಿಬ್ಬಂದಿಯಿಂದ ರಾಜೀನಾಮೆ ಎಚ್ಚರಿಕೆ: ಸೇವೆಯಲ್ಲಿ ವ್ಯತ್ಯಯವಾದರೆ ಸರ್ಕಾರವೇ ಹೊಣೆ : ಅಶೋಕ್​​ – vishwanews24

ಸಚಿವರುಪೆಪ್​ ಟೈಡ್​​​​ ಪಾರ್ಟಿ ಬಗ್ಗೆಯೂ ಮಾಹಿತಿ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಬಂದ ನಂತರ, ಇಲಾಖೆಯು ತನಿಖೆ ನಡೆಸಿತು. ಸಂಘಟಕರು ತಾವು ಎಲೈಟ್ ವರ್ಗಕ್ಕೆ ಹೊಸ ಪೌಷ್ಟಿಕಾಂಶ ಮತ್ತು ಫಾರ್ಮಾಸ್ಯುಟಿಕಲ್ ಐಟಂಗಳನ್ನು ಪರಿಚಯಿಸುತ್ತಿರುವುದಾಗಿ ತಿಳಿಸಿದರು. ಈ ಐಟಂಗಳು ಅಮೆಜಾನ್‌ನ ಡಾರ್ಕ್ ಸ್ಟೋರ್‌ಗಳಿಂದ ಬಂದಿವೆ ಎಂದು ಅವರು ಒಪ್ಪಿಕೊಂಡರು. ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕ ಸರ್ಕಾರವು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಬದ್ಧವಾಗಿದೆ ಎಂದು ಖಾದರ್ ಹೇಳಿದರು.

ಮಂಗಳೂರು : ಜಿಲ್ಲಾ ಕಾರಾಗೃಹಕ್ಕೆ ಪೊಲೀಸರ ದಿಢೀರ್ ದಾಳಿ: 9 ಕೈದಿಗಳಿಂದ 10 ಮೊಬೈಲ್ ವಶ  – vishwanews24

Leave a Reply