ಒಡಿಶಾ : ಸೇತುವೆಯಿಂದ ಉರುಳಿ ಬಿದ್ದ ಬಸ್ಸು ; 12 ಪ್ರಯಾಣಿಕರು ದಾರುಣ ಸಾವು
ಒಡಿಶಾ :ರಸ್ತೆಗೆ ಅಡ್ಡ ಬಂದ ಎಮ್ಮೆಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಬಸ್ ಪಲ್ಟಿಯಾಗಿ 12 ಪ್ರಯಾಣಿಕರು ದಾರುಣವಾಗಿ ಸಾವನಪ್ಪಿದ ಘಟನೆ ಒಡಿಶಾ ರಾಜ್ಯದ ಜಗತ್ಪುರದ ಮಹಾನದಿ ಸೇತುವೆ ಬಳಿ ಮಂಗಳವಾರ ನಡೆದಿದೆ.
ಸೇತುವೆ ಮೇಲಿಂದ ಬಸ್ ಕೆಳಗೆ ಬಿದ್ದು 12 ಪ್ರಯಾಣಿಕರು ದಾರುಣವಾಗಿ ಸಾವನಪ್ಪಿದ ಘಟನೆ ಕಟಕ್ನ ಜಗತ್ಪುರ್ದಲ್ಲಿ ನಡೆದಿದೆ. ಇನ್ನು ಅವಘಡದಲ್ಲಿ 40 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಖಾಸಗಿ ಬಸ್ವೊಂದು ತಲ್ಚೇರ್ನಿಂದ ಕಟಕ್ ನಗರದ ಕಡೆ ತೆರಳುತ್ತಿತ್ತು..ಮಹಾನದಿ ಸೇತುವೆ ಮೇಲೆ ಬಸ್ ಚಲಿಸುತ್ತಿದ್ದ ವೇಳೆ ರಸ್ತೆಗೆ ಎಮ್ಮೆಯೊಂದು ಅಡ್ಡ ಬಂದಿದೆ. ಎಮ್ಮೆಯನ್ನು ತಪ್ಪಿಸಲು ಹೋಗಿ ಬಸ್ ಚಾಲಕರ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಪಲ್ಟಿಯಾಗಿ ಕೆಳಕ್ಕುರುಳಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೆ ಗಾಯಗೊಂಡವರಿಗೆ ಉಚಿತ ಚಿಕಿತ್ಸೆಯನ್ನು ನೀಡುಲಾಗುತ್ತದೆ. ಈ ಅವಘಡದಿಂದ ಬಹಳ ಬೇಸರವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
