ಕಂಬಳ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದ ‘ಲಕ್ಕಿ’ ಇನ್ನಿಲ್ಲ – vishwanews24
ಕಂಬಳ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದ ಕೋಣ ‘ಲಕ್ಕಿ’ ಇನ್ನಿಲ್ಲ
ಕಿನ್ನಿಗೋಳಿ(ದಕ್ಷಿಣ ಕನ್ನಡ) : ಕಂಬಳ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದ ‘ ಲಕ್ಕಿ’ ಎಂಬ ಕೋಣ ಬುಧವಾರ ಕೊನೆಯುಸಿರೆಳೆದಿದೆ.
ಕಳೆದ ವರ್ಷದ ಕಂಬಳ ಸೀಸನ್ ನಲ್ಲಿ 5 ಮೆಡಲ್ ಗೆಳನ್ನು ಲಕ್ಕಿ ಗೆದ್ದುಕೊಂಡಿದ್ದ. ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಲಕ್ಕಿ ಎರಡನೇ ಬಹುಮಾನ ಪಡೆದಿದ್ದ.
ಮಂಗಳೂರು: ಅಗಲಿದ ರಂಗಕರ್ಮಿ ಸದಾನಂದ ಸುವರ್ಣ ಅವರಿಗೆ ಸರಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ – vishwanews24
ಕಕ್ಯಪದವು, ಬೆಂಗಳೂರು,ನರಿಂಗಾನ, ಐಕಳ ಮತ್ತು ಜಪ್ಪು ಕಂಬಳಗಳಲ್ಲಿ ಮೆಡಲ್ ಗೆದ್ದಿದ್ದ.ವರಪಾಡಿ ಬಡಗುಮನೆ ದಿವಾಕರ ಚೌಟ ಅವರು ಸಾಕಿದ್ದ ಕೋಣ ನಿಧನ ಹೊಂದಿರುವುದು ಹಲವು ಕಂಬಳ ಅಭಿಮಾನಿಗಳಿಗೆ ತೀವ್ರ ದುಃಖ ತಂದಿದೆ. ಹಲವು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದರು.
