ಕಟಪಾಡಿ : ಕೊಡುವುದಾದರೇ ನಿಗಮ ಕೊಡಿ-ಕೋಶದ ಅಗತ್ಯವಿಲ್ಲ : ಮುಖ್ಯಮಂತ್ರಿ ಗೆ ಮನವಿ ಮಾಡಿದ ಬಿಲ್ಲವ ಮುಖಂಡರು – Vishwanews24
ಕೊಡುವುದಾದರೇ ನಿಗಮ ಕೊಡಿ-ಕೋಶದ ಅಗತ್ಯವಿಲ್ಲ : ಮುಖ್ಯಮಂತ್ರಿ ಗೆ ಮನವಿಮಾಡಿದ ಬಿಲ್ಲವ ಮುಖಂಡರು
ಕಾಪು: ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೇವಸ್ಥಾನದ ಹಾಗೂ ಜಿಲ್ಲೆಯ ಬಿಲ್ಲವ ಮುಖಂಡರು ಮನವಿ ಪತ್ರ ಸಲ್ಲಿಸಿ ” ಬಿಲ್ಲವ ಸಮಾಜಕ್ಕೆ ಕೋಶ ನಿರ್ಮಾಣದ ಅಗತ್ಯವಿಲ್ಲ-ಕೊಡುವುದಾರೇ ಬಿಲ್ಲವ ಸಮಾಜದ 26 ಉಪಪಂಗಡ ಸೇರಿಸಿಕೊಂಡು ನಿಗಮ ರಚನೆ ಮಾಡಿ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಕ್ಷೇತ್ರಾಧ್ಯಕ್ಷ ಬಿ.ಎನ್ ಶಂಕರ ಪೂಜಾರಿ,ನವೀನ್ ಅಮೀನ್ ಶಂಕರಪುರ,ಶ್ರೀಧರ್,ಗೀತಾಂಜಲಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
