ಕಟಪಾಡಿ ಗಂಜಿಕೇಂದ್ರದಲ್ಲಿ ಗೊಂದಲ ಸೃಷ್ಟಿಸಿದ ವಲಸೆ ಕಾರ್ಮಿಕರು -ಸ್ಥಳಕ್ಕೆ ಎಡಿಸಿ ಭೇಟಿ.
ಕಟಪಾಡಿ ಗಂಜಿಕೇಂದ್ರದಲ್ಲಿ ಗೊಂದಲ ಸೃಷ್ಟಿಸಿದ ವಲಸೆ ಕಾರ್ಮಿಕರು -ಸ್ಥಳಕ್ಕೆ ಎಡಿಸಿ ಭೇಟಿ.
ಕಾಪು:ಭಾರತ ಲಾಕ್-ಡೌನ್ ಸಮಸ್ಯೆಯಿಂದ ಕಂಗಲಾಗಿದ್ದ ವಲಸೆ ಕಾರ್ಮಿಕರಿಗೆ ಕಟಪಾಡಿ ಗಂಜಿ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ಆದರೇ ಶನಿವಾರ ಬೆಳಗ್ಗೆ ಗುಂಪಾಗಿ ಆಗಮಿಸಿದ ವಲಸೆ ಕಾರ್ಮಿಕರ ಗುಂಪೊಂದು ಕಟಪಾಡಿ ಗಂಜಿ ಕೇಂದ್ರದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನ ಪಟ್ಟಾಗ ಸ್ಥಳಿಯ ಪೋಲಿಸ್ ಸಿಬ್ಬಂದಿಗಳು ಸಮಾಧಾನ ಪಡಿಸಿ ತೆರವುಗೊಳಿಸುವ ಕಾರ್ಯ ಮಾಡಿದರು.
ಸ್ಥಳಕ್ಕೆ ಉಡುಪಿ ಜಿಲ್ಲಾ ಅಪಾರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಭೇಟಿ ನೀಡಿ ವಲಸೆ ಕಾರ್ಮಿಕರಿಗೆ ಯಾವುದೇ ರೀತಿಯ ಆಹಾರ ಸಾಮಾಗ್ರಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರರಿಗೆ ತಿಳಿಸಿದರು.
