ಕಟಪಾಡಿ : ಮಹಿಳೆಯ ಮೇಲೆ ಧೂಪ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿ  ಚಿನ್ನಾಭರಣ ಎಗರಿಸಿ ಪರಾರಿಯಾದ ಮೂವರು ನಕಲಿ ಫಕೀರರು – Vishwanews24

Featured, ಉಡುಪಿ

ಕಟಪಾಡಿ : ಮಹಿಳೆಯ ಮೇಲೆ ಧೂಪ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿ  ಚಿನ್ನಾಭರಣ ಎಗರಿಸಿ ಪರಾರಿಯಾದ ಮೂವರು ನಕಲಿ ಫಕೀರರು – Vishwanews24

ಕಟಪಾಡಿ : ಜಿಲ್ಲೆಯ ಕಾಪು ತಾಲೂಕಿನಲ್ಲಿ ಮೂವರು ನಕಲಿ ಫಕೀರರು ಬಂದು ಮಹಿಳೆ ಮೇಲೆ ಧೂಪ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿ ಅವರಿಂದ ಚಿನ್ನಾಭರಣವನ್ನು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.

ಫಕೀರರ ವೇಷ ಧರಿಸಿ ಬಂದ ಮೂವರು ಕಳ್ಳರು, ನಗದನ್ನು ಎಗರಿಸಿ ಪರಾರಿಯಾಗಿದ್ದಾರೆ. ಕಟಪಾಡಿ ಏಣಗುಡ್ಡೆ ಗ್ರಾಮದ ಮುಸ್ಲಿಂ ಸಮುದಾಯದ ಮನೆಯೊಂದಕ್ಕೆ ಆಗಮಿಸಿದ ಮೂವರು, ಸುತ್ತಮುತ್ತಲ ಮನೆಗಳಿಗೆ ಭೇಟಿ ನೀಡಿದರು. ಮನೆಯೊಂದಕ್ಕೆ ತೆರಳಿದ ಮೂರು ಮಂದಿ ನಕಲಿ ಫಕೀರ ವೇಷಧಾರಿಗಳು ಮನೆಯ ಸುತ್ತಲೂ ಓಡಾಡಿ ತಮ್ಮ ಹಾಡಿನ ಮೂಲಕ ಮನೆ ಮಂದಿ ಹೊರಬರುವಂತೆ ಮಾಡಿದ್ದಾರೆ.

ಹೊರ ಬಂದ ಮನೆಯ ಮಹಿಳೆಯ ಮೇಲೆ ಬೂದಿ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿದ್ದಾರೆ. ಈ ಸಂದರ್ಭ ಮಹಿಳೆ ತನ್ನ ಮೈಮೇಲಿನ ಚಿನ್ನಾಭರಣ ಮತ್ತು ಮನೆಯೊಳಗಿನಿಂದ ನಗದನ್ನು ತಂದು ಕೊಟ್ಟು ಫಕೀರರ ಜೋಳಿಗೆಯನ್ನು ತುಂಬಿಸಿದ್ದಾರೆ. ಮಹಿಳೆಯಿಂದ ಚಿನ್ನಾಭರಣ ಮತ್ತು ನಗದು ಪಡೆದ ಬಳಿಕ ಫಕೀರರು ಸ್ಥಳದಿಂದ ಕಾಲ್ಕಿತ್ತಿದ್ದು, ಮಹಿಳೆ ಎಚ್ಚರಗೊಂಡಾಗ ತಾನು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.

ವೇಷಧಾರಿ ನಕಲಿ ಫಕೀರರ ಜೋಳಿಗೆಯನ್ನು ತಾನಾಗಿಯೇ ತುಂಬಿರುವುದಾಗಿ ಮಹಿಳೆ ಮಾಹಿತಿ ನೀಡಿದ್ದಾಳೆ. ಮನೆಗೆ ಬಂದ ಫಕೀರರು ಮನೆಯಂಗಳದಲ್ಲಿ ಓಡಾಡಿದ ಮತ್ತು ಪೇಟೆಯಲ್ಲಿ ನಡೆದಾಡಿದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಟಪಾಡಿ ಭಾಗದಿಂದ ಉಡುಪಿ ಕಡೆಗೆ ಮೂವರು ತೆರಳಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಆ ವೀಡಿಯೋಗಳನ್ನು ವೈರಲ್ ಮಾಡಲಾಗಿದೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಆರೋಪಿಗಳನ್ನು ಕಂಡಲ್ಲಿ ಮಾಹಿತಿ ನೀಡುವಂತೆ ಪೊಲೀಸರು ವಿನಂತಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದ್ದು, ಅಪರಿಚಿತರ ಬಗ್ಗೆ ಜಾಗರೂಕತೆ ವಹಿಸುವಂತೆ ಜನಜಾಗೃತಿ ಮೂಡಿಸಲಾಗುತ್ತಿದೆ.

ಮಂಗಳೂರು : ಪ್ರೀತಿ ನಿರಾಕರಿಸಿದ ಯುವತಿಯ ಅತ್ಯಾಚಾರ : ಆರೋಪಿ ಪೊಲೀಸ್ ವಶಕ್ಕೆ – Vishwanews24