ಕಡಬ : Bigg Boss ಡ್ರೋನ್‌ ಪ್ರತಾಪ್‌ ಸೋಲು:  ಅರ್ಧ ಗಡ್ಡ, ಮೀಸೆ ತೆಗೆದ ಯುವಕ – vishwanews24

Featured, ದಕ್ಷಿಣ ಕನ್ನಡ

ಡ್ರೋನ್‌ ಪ್ರತಾಪ್‌ ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್‌ ಹಾಕಿದ್ದ ಕಡಬದ ಯುವಕ

ಹಸಿ ಮೆಣಸಿನಕಾಯಿ ತಿನ್ನುವುದಾಗಿ ಮತ್ತೊಂದು ವೀಡಿಯೋ ಹರಿಯಬಿಟ್ಟಿದ್ದ ಯುವಕ

ಫಲಿತಾಂಶ ಹೊರಬರುತ್ತಲೇ ಅರ್ಧ ಗಡ್ಡ ಮೀಸೆ ಬೋಳಿಸಿಕೊಂಡು ಹಸಿ ಮೆಣಸಿನಕಾಯಿ ತಿಂದು ವೀಡಿಯೋ  ಅಪ್ಲೋಡ್‌ ಮಾಡಿದ ಯುವಕ

ಕಡಬ: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಡ್ರೋನ್‌ ಪ್ರತಾಪ್‌ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ತೆಗೆದು ಕಡಬದ ಯುವಕನೋರ್ವ ಇದೀಗ ವೈರಲ್‌ ಆಗಿದ್ದಾನೆ.

ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್‌ ಆಬಿದ್‌ ಬಿಗ್‌ ಬಾಸ್‌ನಲ್ಲಿ ಡ್ರೋನ್‌ ಪ್ರತಾಪ್‌ ಗೆದ್ದುಬರುತ್ತಾರೆ; ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್‌ ಹಾಕಿದ್ದರು. ಅಲ್ಲದೆ ಹಸಿ ಮೆಣಸಿನಕಾಯಿ ತಿನ್ನುವುದಾಗಿ ಮತ್ತೂಂದು ವೀಡಿಯೋ ಹರಿಯಬಿಟ್ಟಿದ್ದರು.

ಬಿಜೆಪಿ ಬಹುಸಂಖ್ಯಾತರ ಓಲೈಕೆಗೆ ಭಗವಾಧ್ವಜ ಹಾರಿಸಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದೆ : ಬಿ.ಕೆ ಹರಿಪ್ರಸಾದ್ ಆರೋಪ – vishwanews24

ಇದೀಗ ಕಾರ್ತಿಕ್‌ ವಿನ್ನರ್‌ ಆಗಿದ್ದು, ಪ್ರತಾಪ್‌ ರನ್ನರ್‌ ಅಪ್‌ಗೆ ಸಮಾಧಾನ ಪಟ್ಟುಕೊಂಡಿದ್ದಾರೆ.

ಫಲಿತಾಂಶ ಹೊರಬರುತ್ತಲೇ ಆಬಿದ್‌ ಅರ್ಧ ಗಡ್ಡ ಮೀಸೆ ಬೋಳಿಸಿಕೊಂಡು ಹಸಿ ಮೆಣಸಿನಕಾಯಿ ತಿಂದು ವೀಡಿಯೋ ಮಾಡಿ ಅಪ್ಲೋಡ್‌ ಮಾಡಿದ್ದಾರೆ.

Leave a Reply