ಕಡಬ: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ:  ಬಾಲಕ ಮೃತ್ಯು – ಐವರು ಗಂಭೀರ – Vishwanews24

Featured, ದಕ್ಷಿಣ ಕನ್ನಡ

ಕಡಬ: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ:  ಬಾಲಕ ಮೃತ್ಯು – ಐವರು ಗಂಭೀರ

ಕಡಬ: ಕೆ.ಎಸ್.ಆರ್.ಟಿ. ಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಬಾಲಕ ಸಾವನ್ನಪ್ಪಿ, 5 ಮಂದಿ ಗಂಭೀರ ಗಾಯಗೊಂಡ ಭೀಕರ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ಹೆದ್ದಾರಿಯ ಮರ್ಧಾಳದ ಬ್ರಾಂತಿಕಟ್ಟೆ ಎಂಬಲ್ಲಿ ಫೆ. 13 ರ ಸೋಮವಾರ ನಡೆದಿದೆ.

ಅಪಘಾತದಲ್ಲಿ 14 ವರ್ಷದ ಬಾಲಕ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ.

ಮರ್ಧಾಳ ಕಡೆಯಿಂದ ಸುಬ್ರಹ್ಮಣ್ಯ ತೆರಳುತ್ತಿದ್ದ ಕಾರು ಹಾಗೂ ಧರ್ಮಸ್ಥಳ – ಸುಬ್ರಹ್ಮಣ್ಯ ನಡುವೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ. ಸಿ ಬಸ್ ಮರ್ಧಾಳ ಸಮೀಪದ ಐತ್ತೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಮುಖಾಮುಖಿ ಢಿಕ್ಕಿ ಹೊಡೆದಿದೆ.

ಉಡುಪಿ: ಆನ್‌ಲೈನ್‌ ಮೂಲಕ ಮೊಬೈಲ್ ಲಿಂಕ್ ಕಳುಹಿಸಿ ಸಾವಿರಾರು ರೂ. ವಂಚನೆ – Vishwanews24

ಪ್ರಾಥಮಿಕ ಮಾಹಿತಿ ಪ್ರಕಾರ ಕಾರು ಬೆಂಗಳೂರು ಮೂಲದ್ದು ಎನ್ನಲಾಗಿದೆ. ಗಾಯಾಳುಗಳಿಗೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Leave a Reply